ETV Bharat / state

ಭೀಮಾತೀರದ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಅಧಿಕಾರಿಗಳು - DYSP Shridhar Doddi Warning

ಅಪರಾಧ ಲೋಕದಲ್ಲಿ ಕುಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಕ್ರಿಮಿನಲ್ ಚುಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಎಸ್​ಪಿ ಹೆಚ್.ಡಿ ಆನಂದ ಕುಮಾರ ನೇತೃತ್ವದಲ್ಲಿ ಇಂಡಿ ಡಿವೈಎಸ್​ಪಿ ಶ್ರೀಧರ ದೊಡ್ಡಿ, ಭೀಮಾತೀರದ ಚಡಚಣ, ಉಮರಾಣಿ, ಇಂಡಿ, ಸಿಂದಗಿ, ಆಲಮೇಲ ಭಾಗದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆಯದಂತೆ ಬ್ರೇಕ್ ಹಾಕೋದಾಗಿ ಹೇಳಿದ್ದಾರೆ. ಚಡಚಣ ಭಾಗದ ರೌಡಿ ಶೀಟರ್​ಗಳ ಪರೇಡ್ ನಡೆಸಿ ಎಲ್ಲರಿಗೂ ಡಿವೈಎಸ್​ಪಿ ದೊಡ್ಡಿ ಖಡಕ್ ವಾರ್ನ್ ಮಾಡಿದ್ದಾರೆ..

Rowdy Sheeter Parade
ಚಡಚಣ ಭಾಗದ ರೌಡಿ ಶೀಟರ್​ಗಳ ಪರೇಡ್ ನಡೆಸಲಾಯಿತು.
author img

By

Published : Mar 13, 2022, 2:27 PM IST

ವಿಜಯಪುರ : ಅಪರಾಧ ಲೋಕದಲ್ಲಿ ಕುಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಕ್ರಿಮಿನಲ್ ಚುಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಎಸ್​ಪಿ ಹೆಚ್.ಡಿ ಆನಂದ ಕುಮಾರ್ ನೇತೃತ್ವದಲ್ಲಿ ಇಂಡಿ ಡಿವೈಎಸ್​ಪಿ ಶ್ರೀಧರ ದೊಡ್ಡಿ, ಭೀಮಾತೀರದ ಚಡಚಣ, ಉಮರಾಣಿ, ಇಂಡಿ, ಸಿಂದಗಿ, ಆಲಮೇಲ ಭಾಗದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ನಡೆಯದಂತೆ ಬ್ರೇಕ್ ಹಾಕೋದಾಗಿ ಹೇಳಿದ್ದಾರೆ.

ಇಂಡಿ ಡಿವೈಎಸ್​ಪಿ ಶ್ರೀಧರ ದೊಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು..

ಅಷ್ಟೇ ಅಲ್ಲ, ನಟೋರಿಯಸ್ ಕ್ರಿಮಿನಲ್ ಶಶಿ ಮುಂಡೆವಾಡಿ ಕಳೆದ ಫೆಬ್ರವರಿ 22ರಂದು ಹಣಕ್ಕಾಗಿ ವ್ಯಾಪಾರಿಯೋರ್ವನನ್ನು ಅಪಹರಿಸಿ ಕೈಗೆ ಕೋಳ ಹಾಕಿಸಿಕೊಂಡ ಬಳಿಕ ಖಾಕಿ ಪಡೆ ಮತ್ತಷ್ಟು ಜಾಗೃತವಾಗಿದೆ. ಚಡಚಣ ಭಾಗದ ರೌಡಿಶೀಟರ್​ಗಳ ಪರೇಡ್ ನಡೆಸಿ ಎಲ್ಲರಿಗೂ ಡಿವೈಎಸ್​ಪಿ ದೊಡ್ಡಿ ಖಡಕ್ ವಾರ್ನ್ ಮಾಡಿದ್ದಾರೆ. ಬಾಲ ಬಿಚ್ಚಿದರೆ ಕಟ್ ಮಾಡೋದಾಗಿಯೂ ನೇರವಾಗಿ ಹೇಳಿದ್ದಾರೆ.

ಈ ಭಾಗದ ರೌಡಿಶೀಟರ್​ಗಳಲ್ಲಿ ಕುಖ್ಯಾತಿ ಪಡೆದ ಮಹಾದೇವ ಭೈರಗೊಂಡ ಸೇರಿದಂತೆ ಇತರರ ಬೆವರು ಇಳಿಸಿದ್ದಾರೆ. 50ಕ್ಕೂ ಅಧಿಕ ರೌಡಿ ಶೀಟರ್​ಗಳ ಪರೇಡ್ ನಡೆಸಿ ಪ್ರತಿ ತಿಂಗಳು ಎಲ್ಲರೂ ಚಡಚಣ ಪೊಲೀಸ್ ಠಾಣೆಗೆ ಆಗಮಿಸಿ ಹಾಜರಾತಿ ಹಾಕಿ ಹೋಗಬೇಕೆಂದು ಸೂಚನೆ ನೀಡಿದ್ದಾರೆ. ಚಡಚಣ ವ್ಯಾಪ್ತಿಯ ಯಾವುದೇ ರೌಡಿ ತಮ್ಮ ಪಾಡಿಗೆ ತಾವಿರಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ ರೌಡಿ ಶೀಟರ್​ನಲ್ಲಿದ್ದು ಪರಾರಿಯಾಗಿರೋ ರೌಡಿ ಶೀಟರ್ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಮಲ್ಲಿಕಾರ್ಜುನ ಚಡಚಣ ಹಾಗೂ ಮಹಾದೇವ ಭೈರಗೊಂಡ ಕುಟುಂಬಗಳ ನಡುವೆ ಮೂರು ತಲೆಮಾರುಗಳಿಂದ ಧ್ವೇಷವಿದ್ದು, ಹಲವಾರು ಹೆಣಗಳು ಎರಡೂ ಕಡೆಗಳಲ್ಲಿ ಉರುಳಿವೆ.

ಇದೇ ಮಲ್ಲಿಕಾರ್ಜುನ ಚಡಚಣ ಇಬ್ಬರು ಮಕ್ಕಳಾದ ಧರ್ಮರಾಜನ ನಕಲಿ ಪೊಲೀಸ್ ಎನ್​ಕೌಂಟರ್​ ಹಾಗೂ ಗಂಗಾಧರನ ನಿಗೂಢ ಕೊಲೆಯಲ್ಲಿ ಮಹಾದೇವ ಭೈರಗೊಂಡ ಹಾಗೂ ಇತರರು ಆರೋಪಿಗಳಾಗಿದ್ದಾರೆ.

ಮಹಾದೇವ ಭೈರಗೊಂಡನನ್ನು ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡುವ ಯತ್ನ ಹಾಗೂ ಇಬ್ಬರು ಆತನ ಸಹಚರರ ಕೊಲೆ ಪ್ರಕರಣದಲ್ಲಿ ಮಲ್ಲಿಕಾರ್ಜುನ ಚಡಚಣ ಹಾಗೂ ವಿಮಲಾಬಾಯಿ ಚಡಚಣ ಪ್ರಮುಖ ಆರೋಪಿಗಳು. ಆದ ಕಾರಣ ಇವರ ಬಂಧನಕ್ಕೆ ಪೊಲೀಸರು ಸ್ಪೆಷಲ್ ಟೀಂ ಮಾಡಿದ್ದಾರೆ.

ಜೊತೆಗೆ ಭೀಮಾತೀರದಲ್ಲಿನ ಹಂತಕರು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಡೋದು, ಕೊಲೆ ಬೆದರಿಕೆ ಹಾಕುವುದು, ಹಪ್ತಾ ವಸೂಲಿ ಸೇರಿದಂತೆ ಇತರೆ ಚಟುವಟಿಕೆ ಮಾಡಿದರೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಾನೂನು ಬಾಹಿರ ಚುಟುವಟಿಕೆ ನಡೆಸಿದರೆ ಸರಿಯಾದ ಪಾಠ ಕಲಿಸ್ತೇವೆ ಎಂದು ಪೊಲೀಸರು ವಾರ್ನ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.