ETV Bharat / state

ಪಾಕಿಸ್ತಾನ ಪರ ಸ್ಟೇಟಸ್​​ ಹಾಕಿದ ಆರೋಪ.. ವಿಜಯಪುರದಲ್ಲಿ ಯುವಕನ ಬಂಧನ - kannada news

ಪಾಕಿಸ್ತಾನ್​ ಜಿಂದಾಬಾದ್​ ಎಂದು ಇನ್ಸಸ್ಟಾಗ್ರಾಂನಲ್ಲಿ ಸ್ಟೇಟಸ್​ ಹಾಕಿದ್ದ ಯುವಕನನ್ನು ತಾಳಿಕೋಟೆ ಪೊಲೀಸರು ಬಂಧಿಸಿದ್ದಾರೆ.

police-arrested-a-man-who-posted-pro-pakistan-status
ವಿಜಯಪುರ: ಪಾಕಿಸ್ತಾನ ಪರ ಸ್ಟೇಟಸ್​​ ಹಾಕಿದ ಯುವಕನನ್ನು ಬಂಧಿಸಿದ ಪೊಲೀಸರು
author img

By

Published : May 16, 2023, 8:24 PM IST

ವಿಜಯಪುರ: ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದ ಯುವಕನ ವಿರುದ್ಧ ತಾಳಿಕೋಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ಬಂಧಿತ ಯುವಕ.

ಇನ್ಸಸ್ಟಾಗ್ರಾಂನಲ್ಲಿ 'ಪಾಕಿಸ್ತಾನ ಜಿಂದಾಬಾದ್'​​ ಎಂದು ಸ್ಟೇಟಸ್ ಹಾಕಿಕೊಂಡಿದ್ದನು. ಇದನ್ನು ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ತಾಳಿಕೋಟೆ ಪೊಲೀಸರು ಪಾಕ್​​ ಪರ ಸ್ಟೇಟಸ್ ಹಾಕಿದ್ದ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ತಾಳಿಕೋಟೆ ಪೊಲೀಸ್​ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇಂತಹದ್ದೇ ಪ್ರಕರಣ: ಮುದ್ದೇಬಿಹಾಳದಲ್ಲಿ ಪಾಕಿಸ್ತಾನ ಪರ ಬರಹ ಬರೆದು ಅದನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಾಲೂಕಿನ ನಾಲತವಾಡ ಪಟ್ಟಣದ ಕಾನಬಾವಿ ನಿವಾಸಿ ವೀರೇಶ ಪರಯ್ಯ ಕರ್ಪೂರಮಠ (31) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನಂತರ ಆತನನ್ನು ವಿಜಯಪುರದ ದರ್ಗಾ ಜೈಲಿಗಟ್ಟಿರುವ ಪ್ರಕರಣ ಸೋಮವಾರ ನಡೆದಿದೆ.

ಆರೋಪಿ ವೀರೇಶನು ಕಾಂಗ್ರೆಸ್‌ನ ಶಾಸಕ ಅಪ್ಪಾಜಿ ನಾಡಗೌಡರ ಹೆಸರಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪಾಕಿಸ್ತಾನ ಜಿಂದಾಬಾದ್​​​ ಎಂಬ ಪೋಸ್ಟ್ ಶೇರ್ ಮಾಡಿದ್ದ. ಇದು ಅಲ್ಲಿನ ಸ್ಥಳೀಯರಿಗೆ ಗೊತ್ತಾಗಿ ಪೊಲೀಸ್ ಔಟ್‌ಪೋಸ್ಟ್​ಗೆ ಕರೆತಂದು ಪೊಲೀಸರಿಗೆ ಒಪ್ಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ವಿಚಾರಣೆ ನಡೆಸಿದ ಮೇಲೆ ವೀರೇಶ ತಪ್ಪು ಮಾಡಿರುವುದು ಗೊತ್ತಾಗಿದೆ. ಅಲ್ಲಿಂದ ಆರೋಪಿಯನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು.

ವೀರೇಶನು ಬರಹ ರೂಪದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿರುವುದು ದೃಢಪಟ್ಟಿರುವ ಹಿನ್ನೆಲೆ ನಾಲತವಾಡ ಭಾಗದ ಬೀಟ್ ಪೊಲೀಸ್ ಪಿ.ಎಸ್. ಪಾಟೀಲ ಸರ್ಕಾರದ ಪರವಾಗಿ ಸಲ್ಲಿಸಿದ ದೂರಿನನ್ವಯ ಪೂರ್ವಾಗ್ರಹಪೀಡಿತ ಆರೋಪದಡಿ ಪಿಎಸ್​ಐ ಆರೀಫ್ ಮುಷಾಪುರಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ.

ಬೆಳಗಾವಿಯಲ್ಲೂ ಆಕ್ಷೇಪಾರ್ಹ ಘೋಷಣೆ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ್ ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಗರದ ಆರ್‌ಪಿಡಿ ಕ್ರಾಸ್​​ನಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ತಡೆದಿದ್ದ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಂಭ್ರಮಾಚರಣೆ ನಡೆಯುತ್ತಿತ್ತು. ಯುವಕನೋರ್ವ ಜಿಂದಾಬಾದ್ ಜಿಂದಾಬಾದ್ ಎಂದು ಕೂಗಿದಾಗ ಇನ್ನುಳಿದ ಯುವಕರು ಪಾಕಿಸ್ತಾನ್​ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಟಿಳಕವಾಡಿ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಕಿಡಿಗೇಡಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.