ETV Bharat / state

ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಪ್ರವಾಸಿತಾಣಗಳು: ಸಂಕಷ್ಟದಲ್ಲಿ ಟೂರಿಸ್ಟ್​ ಗೈಡ್ಸ್

ವಿಶ್ವ ವಿಖ್ಯಾತ ಗೋಲ ಗುಮ್ಮಟ ನೋಡಲು ಪ್ರತಿ ವರ್ಷ ದೇಶ, ವಿದೇಶದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ವರ್ಷ ಪ್ರವಾಸಿಗರಲ್ಲದೆ ಗುಮ್ಮಟ ನಗರಿ ಬಿಕೋ ಎನ್ನುತ್ತಿದೆ.‌

ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಪ್ರವಾಸಿತಾಣಗಳು

author img

By

Published : Aug 7, 2020, 1:41 PM IST

ವಿಜಯಪುರ: ಪ್ರತಿವರ್ಷ ನಗರ ಪ್ರವಾಸಿಗರಿಂದ ತುಂಬಿ ತುಳಕುತ್ತಿತ್ತು. ವಿಶ್ವ ಪ್ರಸಿದ್ಧ ಸ್ಮಾರಕ ನೋಡಲು ದೇಶ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದರು. 3 ತಿಂಗಳ ಕಾಲ ಕೊರೊನಾ ಭೀತಿಯಿಂದ ಪ್ರವಾಸಿ ಕೇಂದ್ರಗಳಿಗೆ ಜಿಲ್ಲಾಡಳಿತ ಬೀಗ ಹಾಕಿತ್ತು. ಒಂದು ತಿಂಗಳಿಂದ ಪ್ರವಾಸೋದ್ಯಮ ಆರಂಭಗೊಂಡರೂ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ವಿಶ್ವವಿಖ್ಯಾತ ಗೋಲ ಗುಮ್ಮಟ ನೋಡಲು ಪ್ರತಿ ವರ್ಷ ದೇಶ, ವಿದೇಶದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಕೊರೊನಾ ಭೀತಿ ಹಿನ್ನೆಲೆ ಈ ವರ್ಷ ಪ್ರವಾಸಿಗರಲ್ಲದೆ ಗುಮ್ಮಟ ನಗರಿ ಬಿಕೋ ಎನ್ನುತ್ತಿದೆ.‌ ವರ್ಷವಿಡಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಅದಿಲ್ ಶಾಹಿ ಕಾಲದ ಸ್ಮಾರಕದ ಬಳಿ ಈಗ ಬೆರಳೆಣಿಕೆ ಮಂದಿ ಮಾತ್ರ ಕಾಣುತ್ತಿದ್ದಾರೆ. ಲಾಕ್‌ಡೌನ ಸಡಿಲಿಕೆ ಬಳಿಕ ಕಳೆದ ತಿಂಗಳಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದರೂ, ಕೊರೊನಾ ಭಯದಿಂದ ಯಾರೂ ಭೇಟಿ ನೀಡುತ್ತಿಲ್ಲ. ಕಳೆದ ಒಂದು ತಿಂಗಳಿಂದ ಪ್ರತಿ ದಿನ ಕೇವಲ ಬೆರಳಿಕೆಯಷ್ಟು ಪ್ರವಾಸಿಗರು ಗೋಲ ಗುಂಬಜ್‌ಗೆ ಭೇಟಿ ನೀಡುತ್ತಿರುವುದಿಂದ ಜಿಲ್ಲೆಯ ಪ್ರವಾಸೋದ್ಯಮ ನಷ್ಟದ ಹಾದಿಯಲ್ಲಿದೆ.

ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಪ್ರವಾಸಿತಾಣಗಳು

ಪ್ರಾವಾಸಿಗರನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಟಾಂಗಾವಾಲಾಗಳು, ಪ್ರವಾಸಿ ಮಾರ್ಗದರ್ಶಿಗಳು(ಡೈಡ್ಸ್​), ಹೊಟೇಲ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಪ್ರವಾಸಿ ಕೇಂದ್ರಗಳಲ್ಲಿ ಸಿಬ್ಬಂದಿ ಅಲ್ಲೂಬ್ಬ ಇಲ್ಲೂಬ್ಬ ಸಾರ್ವಜನಿಕರು ಮಾತ್ರ ಕಾಣುತ್ತಿದ್ದಾರೆ‌.

ಇತ್ತ ಪುರಾತತ್ವ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ವರ್ಷ ಜುಲೈನಲ್ಲಿ ಒಟ್ಟು 58,963 ಪ್ರವಾಸಿಗರು ಗುಮ್ಮಟ ವೀಕ್ಷಿಣೆ ಮಾಡಿದ್ದರು. ಇದರಿಂದ ಒಂದೇ ತಿಂಗಳಲ್ಲಿ 6.35 ಲಕ್ಷ ಆದಾಯ ಬಂದಿತ್ತು. ಆದರೆ ಲಾಕ್​ಡೌನ್​ ತೆರವಿನ ಬಳಿಕ ಇದೇ ವರ್ಷ ಜೂಲೈ 6 ರಿಂದ 31ರ ವರೆಗೆ ಕೇವಲ 1,319 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೆ ಇದೇ ಆಗಸ್ಟ್ 1 ರಿಂದ 5 ವರೆಗೂ 835 ಪ್ರಾಸಿಗರು ಮಾತ್ರ ಗುಮ್ಮಟ ವೀಕ್ಷಿಸಲು ಬಂದಿದ್ದಾರೆ. ಪ್ರವಾಸಿಗರ ಕೊರತೆಯಿಂದ ಪ್ರವಾಸಿ ಮಾರ್ಗದರ್ಶಿಗಳಿಗೂ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಆತಂಕದಿಂದ ಗುಮ್ಮಟನಗರಿ ಪ್ರವಾಸಿ ಕೇಂದ್ರಗಳು ಪ್ರವಾಸಿಗರ ಕೊರತೆ ಒಂದು ಕಡೆಯಾದರೆ, ಇತ್ತ ಪ್ರವಾಸಿಗರನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಜನರ ಪರಿಸ್ಥಿತಿ ಅತಂತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.