ETV Bharat / state

ವಿಜಯಪುರ ಗ್ರಾಮ ಸಮರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಗೆಲುವು! - ಗ್ರಾಮ‌ ಪಂಚಾಯತ್ ಚುನಾವಣೆ ಫಲಿತಾಂಶ

ವಿಜಯಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಗೆಲುವು ಸಾಧಿಸಿದ್ದಾರೆ.

most of the congress supported candidates won in gram panchayat election
ವಿಜಯಪುರ ಗ್ರಾಮ ಸಮರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಗೆಲುವು
author img

By

Published : Dec 31, 2020, 8:19 AM IST

ವಿಜಯಪುರ: ಜಿಲ್ಲೆಯ 12 ತಾಲೂಕುಗಳ 199 ಗ್ರಾಮ‌ ಪಂಚಾಯತ್​​ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮುಂಜಾನೆ ಮೂರು ಗಂಟೆಗೆ ಪೂರ್ಣಗೊಂಡಿದೆ. 3,754 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲವು ಸಾಧಿಸಿದ್ದಾರೆ.

ಗ್ರಾಮ ಸಮರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಗೆಲುವು

ನಿನ್ನೆ ಬೆಳಗ್ಗೆ 7 ಗಂಟೆಯಿಂದ ಜಿಲ್ಲೆಯ 9 ಕೇಂದ್ರದಲ್ಲಿ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 199 ಗ್ರಾ.ಪಂ.ಗಳಿಗೆ 3,754 ನೂತನ ಸದಸ್ಯರು ಆಯ್ಕೆಗೊಂಡಿದ್ದಾರೆ. ಪಕ್ಷದ ಬೆಂಬಲಿತರ ಲೆಕ್ಕಾಚಾರ ನೋಡಿದರೆ ಆಡಳಿತಾರೂಢ ಬಿಜೆಪಿಗಿಂತ ಪ್ರತಿ ಪಕ್ಷ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ.

ಅಂದಾಜಿನ ಪ್ರಕಾರ ಕಾಂಗ್ರೆಸ್​​ ಬೆಂಬಲಿತ ಸದಸ್ಯರು 1,000ಕ್ಕೂ ಹೆಚ್ಚಿದ್ದಾರೆ. ಬಿಜೆಪಿ ಬೆಂಬಲಿತರು 850ಕ್ಕಿಂತ ಹೆಚ್ಚು ಇದ್ದಾರೆ. ಇನ್ನೂ ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಜೆಡಿಎಸ್ ಬೆಂಬಲಿತರು ಅತಿ ವಿರಳವಾಗಿ ಆಯ್ಕೆಯಾಗಿದ್ದಾರೆ. ಕನಿಷ್ಠ 100ರ ಗಡಿ ದಾಟಿದ್ದಾರೆ. ಅವರಿಗಿಂತ ಪಕ್ಷೇತರರು ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಅಂದರೆ ಕನಿಷ್ಠ 120ರಷ್ಟು ಸದಸ್ಯರು ಇದ್ದಾರೆ. ಮುಂದೆ ಇವರು ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ ಎನ್ನುವುದು ನೋಡಬೇಕಿದೆ.

ವಿಜಯಪುರ ತಾಲೂಕಿನ 17 ಗ್ರಾ.ಪಂ.ನ 343 ಸ್ಥಾನಗಳು, ಬಬಲೇಶ್ವರ ತಾಲೂಕಿನ 15 ಗ್ರಾ.ಪಂ.ಗಳ 299 ಸ್ಥಾನಗಳು, ತಿಕೋಟಾ ತಾಲೂಕಿನ 14 ಗ್ರಾ.ಪಂ.ಗಳ 287 ಸ್ಥಾನ, ಬಸವನ ಬಾಗೇವಾಡಿಯ15 ಗ್ರಾ.ಪಂ.ನ 313 ಸ್ಥಾನ, ನಿಡಗುಂದಿ ತಾಲೂಕಿನ 8 ಗ್ರಾ.ಪಂ.ನ 144 ಸ್ಥಾನ, ಕೊಲ್ಹಾರ ತಾಲೂಕಿನ 8 ಗ್ರಾ.ಪಂ.ನ 144 ಸ್ಥಾನ, ಮುದ್ದೇಬಿಹಾಳದ 20 ಗ್ರಾ.ಪಂ.ನ 326 ಸ್ಥಾನ, ತಾಳಿಕೋಟೆ ತಾಲೂಕಿನ 14 ಗ್ರಾ.ಪಂ.ಗಳ 258 ಸ್ಥಾನ, ಇಂಡಿ ತಾಲೂಕಿನ 38 ಗ್ರಾ.ಪಂ.ನ 671 ಸ್ಥಾನ, ಚಡಚಣ ತಾಲೂಕಿನ 13 ಗ್ರಾ.ಪಂ.ನ 271ಸ್ಥಾನ, ಸಿಂದಗಿ ತಾಲೂಕಿನ 23 ಗ್ರಾ.ಪಂ.ನ 431 ಸ್ಥಾನ ಹಾಗೂ ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ.ಪಂ.ನ 255 ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿತ್ತು. ಈ ಪೈಕಿ 375 ಸ್ಥಾನಗಳನ್ನು ಮೊದಲೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: ಗ್ರಾಮ ಸಮರದಲ್ಲಿ ಗೆಲುವು ಸಾಧಿಸಿದ ಹೋಮ್ ಗಾರ್ಡ್ ಸಿಬ್ಬಂದಿ!

ಒಟ್ಟು 3,378 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮುಂಜಾನೆ ಮೂರು ಗಂಟೆಗೆ ಮತ ಎಣಿಕೆ ಕಾರ್ಯ ಪೂರ್ಣಗೊಳಿಸಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು. ನಂತರ ಅವರಿಗೆ ಗೆಲುವಿನ ಪ್ರಮಾಣ ಪತ್ರವನ್ನು ಸಹ‌ ನೀಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.