ETV Bharat / state

ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ: ಒಬ್ಬ ಆರೋಪಿ ಪೊಲೀಸರಿಗೆ ಶರಣು - ಸಿಂದಗಿ ಪಟ್ಟಣ

ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ - ಗಂಗೂಬಾಯಿ ಮೀಸಿ ಯಲ್ಲಪ್ಪ ಯಂಕಂಚಿ ಕೊಲೆಯಾದ ದುರ್ದೈವಿ - ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ.

Miscreants killed a young woman
ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ
author img

By

Published : Jun 16, 2023, 10:25 AM IST

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಕುಬೋಟೋ ಏಜೆನ್ಸಿ ಎದುರು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಇದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮೃತಳನ್ನು ನಗರದ ರೇಣುಕಾ(ಗೊಲ್ಲರ) ನಗರದ ನಿವಾಸಿ ಗಂಗೂಬಾಯಿ ಮೀಸಿ ಯಲ್ಲಪ್ಪ ಯಂಕಂಚಿ (28) ಎಂದು ಗುರುತಿಸಲಾಗಿದೆ.

ಸಂಬಂಧಿಕ ಯುವಕನೊಂದಿಗೆ ವಿಜಯಪುರದಿಂದ ಸಿಂದಗಿಯತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ವೇಳೆ, ಹಿಂಬಾಲಿಸುತ್ತ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಕೆಯ ಕತ್ತಿಗೆ ಚಾಕುವಿನಿಂದ ಇರಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಯುವತಿ ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಚೂರಿ ಇರಿದ ಬಳಿಕ ದುಷ್ಕರ್ಮಿಗಳು ಆಕೆಯ ದ್ವಿಚಕ್ರ ವಾಹನವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ. ಜತೆಯಲ್ಲಿದ್ದ ಯುವಕ ದುಷ್ಕರ್ಮಿಗಳು ಹಾಗೂ ಕೈಯಲ್ಲಿದ್ದ ಚಾಕು ಕಂಡು ಹೆದರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಆಸ್ತಿ ಕಲಹ ಕಾರಣ ಎಂದು ಶಂಕಿಸಲಾಗಿದೆ.

ಪ್ರಕರಣದ ವಿವರ: ಕೊಲೆಯಾದ ಗಂಗೂಬಾಯಿಗೆ ಇನ್ನೂ ಮದುವೆಯಾಗಿರಲಿಲ್ಲ. ಇವರ ಕುಟುಂಬದಲ್ಲಿ ನಾಲ್ವರು ಯುವತಿಯರು ಹಾಗೂ ಒಬ್ಬ ತಮ್ಮನಿದ್ದಾನೆ. ಸಿಂದಗಿ ಬೈಪಾಸ್​ನಲ್ಲಿ ಗಂಗೂಬಾಯಿ ಅವರ ಏಳು ಎಕರೆ ಜಮೀನಿದೆ. ಇದರ ಜತೆಗೆ ಆಕೆ ಬಡ್ಡಿ ವ್ಯವಹಾರ ಸಹ ಮಾಡುತ್ತಿದ್ದಳು. ಇವಳ ಆಸ್ತಿ ಮೇಲೆ ದಾಯಾದಿಗಳ ಕಣ್ಣು ಬಿದ್ದಿತ್ತು.‌ ಇದೇ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಡಿ.ಹುಲಗಪ್ಪ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ‌ ನಡೆದು ಕೆಲವೇ ಗಂಟೆಗಳಲ್ಲಿ ಒಬ್ಬ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ತಂದೆಯ ಹತ್ಯೆ: ಮಗ ತನ್ನ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಬುಧವಾರ ನಡೆದಿತ್ತು. ಗಂಗರಾಜು (55) ಕೊಲೆಗೀಡಾದ ದುರ್ದೈವಿ. ಆರೋಪಿ ಪುತ್ರ ಚೇತನ್ (28)ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದರು.

ಘಟನೆಯ ವಿವರ: ಬುಧವಾರ(ಜೂ.14) ರಾತ್ರಿ ಅಂದಾಜು 2:30 ಗಂಟೆಯ ಸುಮಾರಿಗೆ ಮನೆಯಲ್ಲಿ ಇಬ್ಬರ ನಡುವೆ ಜಗಳವಾಗಿದೆ. ವಾಗ್ವಾದ ಅತಿರೇಕವಾಗಿದೆ. ಬಳಿಕ ಮನೆ ಹೊರಗಡೆ ಮಲಗಿದ್ದ ತಂದೆಯ ತಲೆ ಮೇಲೆ ಮಗ ಕಲ್ಲು ಎತ್ತಿ ಹಾಕಿದ್ದ. ಘಟನೆಯ ನಂತರ ತಾನೇ ಆಸ್ಪತ್ರೆಗೆ ಕೊಂಡೊಯ್ದಿದ್ದ. ಆಸ್ಪತ್ರೆಯಲ್ಲಿ ವೈದ್ಯರು ಗಂಗರಾಜು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದರು. ಶವವನ್ನು ಮನೆ ಬಳಿ ತಂದಿದ್ದ ಆರೋಪಿ, ತಂದೆ ಮನೆಯ ಮೇಲಿಂದ ಆಯತಪ್ಪಿ ಬಿದ್ದರೆಂದು ಕಥೆ ಕಟ್ಟಿದ್ದ. ಅಷ್ಟೇ ಅಲ್ಲದೇ, ತಂದೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕ ಮನೆಯವರನ್ನು ವಿಚಾರಿಸಿದ್ದಾನೆ. ಮುಂಜಾನೆ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಾಗಿತ್ತು.

ಇದನ್ನೂ ಓದಿ: ಮಲಗಿದ್ದ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಗ; ಬೆಂಗಳೂರಿನಲ್ಲಿ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.