ETV Bharat / state

ಮಾರ್ಗಸೂಚಿಯಂತೆ ಉತ್ಸವಗಳು ನಡೆಯಲಿ: ಡಿವೈಎಸ್​ಪಿ ಶಾಂತವೀರ - ಮುದ್ದೇಬಿಹಾಳ ಶಾಂತಿಪಾಲನಾ ಸಭೆ

ಗಣೇಶ ಉತ್ಸವ ಮತ್ತು ಮೊಹರಂ ಹಬ್ಬಗಳ ಆಚರಣೆಗೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ಅವನ್ನು ಪಾಲಿಸಿ ಹಬ್ಬ ಆಚರಣೆ ಮಾಡಬೇಕು ಎಂದು ಬ. ಬಾಗೇವಾಡಿ ಡಿವೈಎಸ್​ಪಿ ಈ. ಶಾಂತವೀರ ಹೇಳಿದರು.

Meeting about festival
Meeting about festival
author img

By

Published : Aug 21, 2020, 9:19 PM IST

ಮುದ್ದೇಬಿಹಾಳ: ಕೊರೊನಾ ವೈರಸ್ ಹತೋಟಿಗೆ ಬಾರದ ಕಾರಣ ಗಣೇಶ ಉತ್ಸವ ಮತ್ತು ಮೊಹರಂ ಹಬ್ಬಗಳ ಆಚರಣೆಗೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ಅವನ್ನು ಪಾಲಿಸಿ ಹಬ್ಬ ಆಚರಣೆ ಮಾಡಬೇಕು ಎಂದು ಬ. ಬಾಗೇವಾಡಿ ಡಿವೈಎಸ್​ಪಿ ಈ. ಶಾಂತವೀರ ಹೇಳಿದರು.

ತಾಳಿಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಉತ್ಸವ ಮತ್ತು ಮೊಹರಂ ಆಚರಣೆ ಕುರಿತು ಕರೆದಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದರು.

ಹಬ್ಬಗಳ ಆಚರಣೆಗೆ ಸರ್ಕಾರ ಪ್ರತಿ ವರ್ಷ ಸಾಕಷ್ಟು ಸಡಿಲಿಕೆಗಳನ್ನು ನೀಡುತ್ತಾ ಬಂದಿದೆ. ಆದರೆ ಇದೀಗ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ತಿಳಿಸಿದರು.
ವಾರ್ಡ್​ಗೆ ಒಂದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಮೂರ್ತಿಯ ಎತ್ತರ 4 ಅಡಿ ಮೀರುವಂತಿಲ್ಲ. ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ದ್ವನಿವರ್ಧಕಗಳನ್ನು ಅಳವಡಿಸುವಂತಿಲ್ಲ. ಅನ್ನಪ್ರಸಾದವಾಗಲಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನಾಗಲಿ ನಡೆಸಕೂಡದು. ಪುರಸಭೆಯಿಂದ ಮೊಬೈಲ್ ಟ್ಯಾಂಕ್ ನಿರ್ಮಿಸಲಾಗುತ್ತದೆ. ಅದರಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.

ಮೊಹರಂ ಹಬ್ಬದ ಕುರಿತಂತೆ, ದೇವರ ಪ್ರತಿಷ್ಠಾಪನೆ ಹೊರತುಪಡಿಸಿ ಜನಸಂದಣಿ ಸೇರುವಂತಿಲ್ಲ. ದೇವರ ದಫನ್ ಮೆರವಣಿಗೆ ಮಾಡುವಂತಿಲ್ಲ. ಅದೇ ಸ್ಥಳದಲ್ಲಿಯೇ ದಫನ್ ಕಾರ್ಯವನ್ನು ಕೈಗೊಳ್ಳಬೇಕು. ಕಾನೂನು ಕಟ್ಟಳೆಗಳನ್ನು ಮೀರಿ ನಡೆದುಕೊಂಡರೆ ಮಂಡಳಿ ಹಾಗೂ ಮೊಹರಂ ದೇವರ ಪ್ರತಿಷ್ಠಾಪನೆ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.