ಮುದ್ದೇಬಿಹಾಳ (ವಿಜಯಪುರ): ವಿಶ್ವದಲ್ಲಿ ಭಾರತಕ್ಕೆ ಎಲೆಕ್ಟ್ರಾನಿಕ್ಸ್ ತಯಾರಿಕೆ ಹಬ್ ಸ್ಥಾನಮಾನ ದೊರೆಯುವಂತೆ ಮಾಡಲು ಎಂ.ಟೆಕ್.ಪದವೀಧರ ಮಲ್ಲನಗೌಡ ಬಿರಾದಾರ ಪತ್ರ ಬರೆದಿದ್ದಾರೆ.
ಪ್ರತ್ಯೇಕ ಪತ್ರಗಳನ್ನು ಬರೆದಿರುವ ಪದವೀಧರ ಮಲ್ಲನಗೌಡ ಅವರು, ಭಾರತವು ವಿಶ್ವದಲ್ಲಿ ಪ್ರಗತಿಯಲ್ಲಿ ಸಾಗುತ್ತಿರುವ ಪರ್ಯಾಯ ಜಾಗತಿಕ ತಯಾರಿಕಾ ತಾಣವಾಗಿ ರೂಪಗೊಳ್ಳುತ್ತಿದ್ದು. ಈ ನಿಟ್ಟಿನಲ್ಲಿ ಅರೆವಾಹಕ ತಂತ್ರಜ್ಞಾನ, ಡಿಜಿಟಲ್ ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಏರೋಸ್ಪೇಸ್ ಎಂಜಿನಿಯರಿಂಗ್, ಎಂಬೆಡೆಡ್ ಸಿಸ್ಟಮ್ಸ್ ಮತ್ತು ಮೆಡಿಕಲ್ ಡಿವೈಸ್‌ಗಳನ್ನು ಪರಿಗಣಿಸಲು ಇತರ ಸಮುಚ್ಛಯ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಭಾರತವು ಇಲೆಕ್ಟ್ರಾನಿಕ್ ಉತ್ಪನ್ನಗಳನ್ನು ಉತ್ಪಾದಿಸಬಹುದು ಮತ್ತು ಅವುಗಳನ್ನು ಆಮದು ಮಾಡಿಕೊಳ್ಳುವ ಬದಲು ಸ್ವಯಂ ನಿರಂತರ, ಭಾರತೀಯ ಆರ್ಥಿಕತೆಯನ್ನು ಉತ್ತಮಗೊಳಿಸಲು ರಫ್ತು ಮಾಡಬಹುದು. ಇದರ ಜೊತೆಗೆ ಉದ್ಯೋಗದ ಭಾರೀ ಅವಕಾಶಗಳನ್ನೂ ಸೃಷ್ಟಿಸಬಹುದಾಗಿದೆ. ಸ್ವದೇಶಿ ವಿದ್ಯುನ್ಮಾನ ಉತ್ಪನ್ನಗಳ ಬಳಕೆಯನ್ನು ಪ್ರೇರೇಪಿಸಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಉತ್ತಮ ಅವಕಾಶ:
ಆಲಮಟ್ಟಿ ಔಟ್ ಸ್ಕರ್ಟ್ ಪ್ರದೇಶದಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಮಾನೋಫೇರಿಂಗ್ ಹಬ್ ಅನ್ನು ಆಲಮಟ್ಟಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಒದಗಿಸಬಹುದು. ಕೂಡಗಿ (ಎನ್‌ಟಿಪಿಸಿ)ಸೂಪರ್ ಥರ್ಮಲ್ ಪವರ್ ಸ್ಟೇಷನ್‌ದಿಂದ ನಿರಂತರ ವಿದ್ಯುತ್ ಪೂರೈಕೆಯನ್ನು ಒದಗಿಸಬಹುದು.
ಆಲಮಟ್ಟಿ ಔಟ್ ಸ್ಕರ್ಟ್ ಪ್ರದೇಶ ಬೆಳಗಾವಿ, ಹುಬ್ಬಳ್ಳಿ - ಧಾರವಾಡ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಕೇಂದ್ರ ಸ್ಥಳವಾಗಿದೆ. ಯೋಗ್ಯ ಬೆಲೆಯಲ್ಲಿ ಭೂಮಿ ಲಭ್ಯತೆ, ಮತ್ತು ಕಡಿಮೆ ಕಾರ್ಯಾಚರಣೆ ವೆಚ್ಚ, ಕಡಿಮೆ ವಿಸ್ತೀರ್ಣದ ನಿರ್ಬಂಧನೆ, ಕನಿಷ್ಠ ಮಾಲಿನ್ಯ,ಈ ಸ್ಥಳ ಹೈದರಾಬಾದ್, ಗೋವಾ, ಮುಂಬಯಿ ಮತ್ತು ಪುಣೆಯೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಪರಿಸರ ಇದೆ ಎಂದು ತಿಳಿಸಿದ್ದು , ಇನ್ನೂ ಅನೇಕ ಸಲಹೆಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ.