ವಿಜಯಪುರ: ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಅವರ ಧರ್ಮಪತ್ನಿಯ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ. ಆಶಾ ಪಾಟೀಲ್ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿದ್ದು, ವಿವಿಧ ಪೋಸ್ಟ್ಗಳನ್ನು ಹಾಕಲಾಗುತ್ತಿದೆ.
ಆಶಾ ಪಾಟೀಲ್ರ ಆಪ್ತ ಸಹಾಯಕ ರವಿಶಂಕರ ಎನ್‌ಪಿಯ ಫೇಸ್‌ಬುಕ್ ಅಕೌಂಟ್‌ಗೆ ಆಶಾ ಪಾಟೀಲ್ ಪೇಜ್ ಆ್ಯಡ್ ಮಾಡಲಾಗಿತ್ತು. ಇದನ್ನು ಖದೀಮರು ಹ್ಯಾಕ್ ಮಾಡಿದ್ದು, ಬಾಕ್ಸಿಂಗ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಲಾಗ್ ಇನ್ ಪಾಸ್ವರ್ಡ್ ಬದಲಾಯಿಸಿದರೂ ಹ್ಯಾಕರ್ಸ್ ಕೃತ್ಯ ಮುಂದುವರೆಸಿದ್ದಾರೆ.
ಈ ಬಗ್ಗೆ ವಿಜಯಪುರದ ಸಿಇಎನ್(CEN) ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡುವ ಬೆದರಿಕೆ: ಮೊಬೈಲ್ಗೆ ಬಂದ ಮೆಸೇಜ್ ನಂಬಿ 3.33 ಲಕ್ಷ ಕಳೆದುಕೊಂಡ ವ್ಯಕ್ತಿ