ETV Bharat / state

ಪತ್ರಕರ್ತರ ಸಮ್ನೇಳನ ರಾಜಕೀಯ ಚರ್ಚೆ ವೇದಿಕೆಯಲ್ಲ; ಕಾರಜೋಳಗೆ ಪರೋಕ್ಷವಾಗಿ ಟಾಂಗ್​ ನೀಡಿದ ಎಂಬಿ ಪಾಟೀಲ್​ - ಕಾಯಕ ಮತ್ತು ದಾಸೋಹದ ತತ್ವಗಳ ಮಹತ್ವ

ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಿದ್ದು, ವ್ಯವಸ್ಥೆಗೆ ಮಾರಕ ಆಗದಂತೆ ಸಮಯೋಚಿತ ನಿರ್ಧಾರ ನಡೆಸುವ ಮೂಲಕ ವರದಿ ಮಾಡಬೇಕು ಎಂದು ಸಲಹೆ ನೀಡಿದರು.

http://10.10.50.85:6060/reg-lowres/05-February-2023/kn-vjp-02-mbpatil-news-av-ka10055_05022023191840_0502f_1675604920_986.jpg
http://10.10.50.85:6060/reg-lowres/06-February-2023/mb-patil_0602newsroom_1675656196_638.jpg
author img

By

Published : Feb 6, 2023, 10:05 AM IST

Updated : Feb 6, 2023, 4:11 PM IST

ವಿಜಯಪುರ: ವಿಜಯಪುರ ಬಸವಣ್ಣನವರಿಗೆ ಜನ್ಮ ನೀಡಿದ ಭೂಮಿ. ಕಾಯಕ ಮತ್ತು ದಾಸೋಹದ ತತ್ವಗಳ ಮಹತ್ವವನ್ನು ಜಗತ್ತಿಗೆ ಸಾರಿದವರು ಬಸವಣ್ಣ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ‌ಜಿಲ್ಲೆಯಲ್ಲಿ ನಡೆದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ ಎಂದು ಬಸವಣ್ಣ ಅವರ ದಾರ್ಶನಿಕತ್ವದ ಮಹತ್ವ ಸಾರಿದರು.

ಡಾ. ಫ.ಗು ಹಳಕಟ್ಟಿ ಅವರು, 1924ರ ವೇಳೆಯಲ್ಲಿ 35ವರ್ಷ ನವ ಕರ್ನಾಟಕ, ಹಾಗೂ 24 ವರ್ಷ ಶಿವಾನುಭವ ಮಾಸ ಪತ್ರಿಕೆ ನಡೆಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಿದ್ರು. ಬಸವಾದಿ ತತ್ವಗಳು, ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ಫ ಗು ಹಳಕಟ್ಟಿ ಅವರು ಇರದಿದ್ದರೆ ಬಸವಾದಿ ಶರಣರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಬಸವ ತತ್ವಗಳನ್ನು ನಾಡಿನೆಲ್ಲಡೆ ಸಾರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಷ್ಟೆ ಮಹತ್ವವನ್ನು ಪತ್ರಿಕಾರಂಗ ಹೊಂದಿದ್ದು, ಇದನ್ನು ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ಥಂಬ ಎಂದು ಪರಿಗಣಿಸಲಾಗಿದೆ. ಈ ಅಂಗಳ ಬದ್ಧತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ರಾಜಕೀಯ, ಅಧಿಕಾರಿ ವರ್ಗ ಸೇರಿದಂತೆ ಪತ್ರಿಕೆಯಲ್ಲೂ ಒಳ್ಳೆಯವರು ಕೆಟ್ಟವರು ಇದ್ದೇ ಇರುತ್ತಾರೆ. ಅದರಂತೆ ಪತ್ರಿಕಾ ರಂಗದಲ್ಲಿ ಬಹಳಷ್ಟು ಒಳ್ಳೆಯವರಿದ್ದಾರೆ ಎಂದರು. ಇನ್ನು ಇದೇ ವೇಳೆ ಪತ್ರಿಕಾ ಸಮ್ಮೇಳಕ್ಕೆ ನಿನ್ನೆ ಓರ್ವ ಸಚಿವರು ಆಗಮಿಸಿ ಇಲ್ಲಿ ಬಂದ ಅವರು, ಬೇರೆ ವಿಚಾರ ಮಾತನಾಡಿದ್ದಾರೆ ಎಂದು ಹೆಸರು ತೆಗೆದುಕೊಳ್ಳದೇ ಸಚಿವ ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದರು. ಅವರಿಗೆ ಮಾತನಾಡುವ ಚಪಲ‌ ಇದೆ, ನಾನು ಅವರ ಹೆಸರು ಹೇಳುವುದಿಲ್ಲ. ಇಲ್ಲಿ ಬಂದು ಸಮಸ್ಯೆಗಳ ಬಗ್ಗೆ ಮಾತಾಡಬೇಕಿತ್ತು, ರಾಜಕೀಯ ಮಾತನಾಡಬಾರದು ಎಂಬುದನ್ನು ಅವರು ಮರೆತರು ಎಂದು ಎಂ ಬಿ ಪಾಟೀಲ್​ ಹೇಳಿದರು.

ಪತ್ರಕರ್ತರ ಸಮ್ನೇಳ
ಪತ್ರಕರ್ತರ ಸಮ್ನೇಳ

ಇದೇ ವೇಳೆ ಮಾಜಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ವಿಜಯಪುರದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂತೋಷ ವಾಗಿದೆ. ಇಲ್ಲಿ ಕಾರ್ಯಕ್ರಮ ಮಾಡುವುದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ತಂಡಕ್ಕೆ ಸವಾಲಾಗಿತ್ತು.ಅದನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಅವರಿಗೆ ಅಭಿನಂದನೆಗಳು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೀವು ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದ್ದೀರಿ. ಸರ್ಕಾರ ಸಂದಿಗ್ಧ ಸ್ಥಿತಿ ತಂದರೂ ಎದೆಗಾರಿಕೆಯಿಂದ ವರದಿ ಮಾಡುವ ಪತ್ರಕರ್ತರು ಇದ್ದಾರೆ. ಛಲ ಸಮಾಜದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ಆಗದಂತೆ ಸಮಯೋಚಿತ ನಿರ್ಧಾರ ತೆಗೆದುಕೊಳ್ತಿರಿ ಎಂಬ ಭರವಸೆ ಇದೆ ಎಂದು ತಿಳಿಸಿದರು.

ನಾವೆಲ್ಲ ರಾಜಕೀಯ ಪಕ್ಷದವರು ಒಂದೆಡೆ ಬರಬೇಕಾದರೆ ನೀವೆಲ್ಲ ಕಾರಣ. ನಿನ್ನೆ ಬಿಜೆಪಿ, ಇಂದು ಕಾಂಗ್ರೆಸ್ ನವರನ್ನು ತಂದಿರಿ. ಹಾಗೆ ಮಾಡಬೇಡಿ, ಸಾಧ್ಯವಾದರೆ ನಮ್ಮನ್ನು ಎಲ್ಲ ಪಕ್ಷದ ರಾಜಕಾರಣಿಗಳ ಜೊತೆ ಕೂಡಿಸಿ ಎಂದು ನಗೆ ಚಟಾಕಿ ಹಾರಿಸಿದರು. ಎಲ್ಲರೂ ಸೇರಿ ಈ ಸಮ್ಮೇಳನ ಯಶಸ್ವಿ ಮಾಡಿದ್ದೀರಿ. ಶಿವಾನಂದ ತಗಡೂರ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು ಅವಿರೋಧ ಆಯ್ಕೆ ಮಾಡಿದ್ದೀರಿ. ಹಾಗೇ ಎಂ‌ ಎಲ್ ಎ ಗಳು ಅವಿರೋಧವಾಗಿ ಆಯ್ಕೆ ಆಗುವಂತೆ ಮಾಡಬೇಕು ಎಂದರು.

ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವ : ಸಮಾರಂಭದಲ್ಲಿ ಒಟ್ಟೂ 55 ಪತ್ರಕರ್ತರಿಗೆ ವಿವಿಧ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಟಿವಿ ಭಾರತದ ವಿಜಯಪುರ ವರದಿಗಾರ ಶರಣು ಪಾಟೀಲ ಹಾಗೂ ತುಮಕೂರು ವರದಿಗಾರ ಶಾಂತಿನಾಥ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ಕೈಮುಗಿದು ಏರು ಇದು ಕನ್ನಡದ ತೇರು.. ‘ಕನ್ನಡ ರಥ’ವಾದ ಹಾವೇರಿಯ ಸಾರಿಗೆ ಬಸ್​

Last Updated : Feb 6, 2023, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.