ETV Bharat / state

ಗುಮ್ಮಟನಗರಿಗೆ ಕಾಲಿಟ್ಟ ಮುಂಗಾರು: ರಾತ್ರಿ ವರುಣಾರ್ಭಟಕ್ಕೆ ರೈತರು ಫುಲ್​ ಖುಷ್​​..! - ಕೃಷಿ ಚಟುವಟಿಕೆಗಳು

ವಿಜಯಪುರ ಜಿಲ್ಲೆಗೆ ಮುಂಗಾರು ಕಾಲಿಟ್ಟಿದ್ದು, ರೈತರು ಬಿತ್ತನೆಗೆ ಭೂಮಿ ಹದಗೊಳಿಸಿಕೊಳ್ಳುತ್ತಿದ್ದಾರೆ.

mansoon rain
ಮುಂಗಾರು ಮಳೆ
author img

By

Published : Jun 11, 2020, 7:08 AM IST

ವಿಜಯಪುರ: ಜಿಲ್ಲೆಗೆ ಮುಂಗಾರು ಕಾಲಿಟ್ಟಿದೆ. ಜೂನ್ ಮೊದಲ ವಾರ ಎರಡು ದಿನ ಸತತವಾಗಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಸಂತಸಗೊಂಡು ಬಿತ್ತನೆಗೆ ಭೂಮಿ ಹದಗೊಳಿಸಿಕೊಳ್ಳುತ್ತಿದ್ದಾರೆ.

ಮುಂಗಾರು ಮಳೆ

ಜೂನ್​​ 7ರಿಂದಲೇ ಮುಂಗಾರು ಮಳೆ ಆರಂಭಗೊಳ್ಳಬೇಕಿತ್ತು. ಆದರೆ, ಎರಡು ದಿನ ತಡವಾಗಿ ಮಳೆ ಆರಂಭವಾಗಿದೆ. ಕಳೆದ ಎರಡು ದಿನ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಬುಧವಾರ ರಾತ್ರಿ 11ಗಂಟೆಯಿಂದ ಆರಂಭಗೊಂಡು ಜಿಟಿ ಜಿಟಿಯಾಗಿ ಸುಮಾರು ಮೂರು ಗಂಟೆಗಳ ಕಾಲ ಮಳೆ ಸುರಿಯಿತು.

ರಾತ್ರಿ ಬಿರುಗಾಳಿ ಬೀಸುತ್ತಿದ್ದಂತೆ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.