ETV Bharat / state

ಯತ್ನಾಳ್ ಬದಲು ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಟಿಕೆಟ್‌‌‌ ನೀಡುವಂತೆ ಒತ್ತಾಯ

author img

By

Published : Apr 4, 2023, 4:41 PM IST

ವಿಜಯಪುರ ನಗರ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಬದಲು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

if-mla-yatnal-is-given-ticket-he-will-not-be-neutral-and-vote-for-bjp-leaders-warn
ಭಿನ್ನಮತ ಸ್ಫೋಟ: ಶಾಸಕ ಯತ್ನಾಳ್​ಗೆ ಟಿಕೆಟ್‌‌‌ ನೀಡದಂತೆ ಸ್ವಪಕ್ಷದ ಮುಖಂಡರ ಎಚ್ಚರಿಕೆ
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಗುದ್ದಾಟ

ವಿಜಯಪುರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ‌ ಕ್ಷೇತ್ರದ ಬಿಜೆಪಿ ಟಿಕೆಟ್​​ ಅನ್ನು ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಬದಲಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರಿಗೆ ನೀಡಬೇಕು ಎಂದು ವಿವಿಧ ಸಮುದಾಯದ ಮುಖಂಡರು ಹಾಗೂ ಪಕ್ಷದಿಂದ ಉಚ್ಚಾಟಿತ ಮುಖಂಡರು ಒತ್ತಾಯಿಸಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಮೂಲ ಮುಖಂಡರನ್ನು ಕೈಬಿಟ್ಟು ಬಸನಗೌಡ ಯತ್ನಾಳ್​ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದರು.‌ ಇದು ಭಿನ್ನಮತಕ್ಕೆ ಕಾರಣವಾಗಿತ್ತು. ಇದರಿಂದಾಗಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ 8 ಮುಖಂಡರು ಬಂಡಾಯವೆದ್ದು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದಾದ ನಂತರ ಯತ್ನಾಳ್​ ಒತ್ತಡಕ್ಕೆ ಮಣಿದು 8 ಮುಖಂಡರನ್ನು ಉಚ್ಚಾಟಿಸಲಾಗಿತ್ತು.‌ ಈಗ ಮತ್ತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

"ಯತ್ನಾಳ ಕಾರ್ಯಕರ್ತರೊಂದಿಗೆ ಬೆರೆಯುವುದಿಲ್ಲ. ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಮೂಲ ಬಿಜೆಪಿ ಕಾರ್ಯಕರ್ತರು ತಟಸ್ಥವಾಗಿ ನಿಲ್ಲುವ ನಿಲುವು ತಾಳಿದ್ದಾರೆ. ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಕಳೆದ ಬಾರಿ ಟಿಕೆಟ್ ನೀಡದಿದ್ದರೂ ಪಕ್ಷ ಬಿಡದೇ ಪಕ್ಷನಿಷ್ಠೆ ತೋರಿದ್ದಾರೆ.‌ ಭ್ರಷ್ಟಾಚಾರ ಮಾಡಿಲ್ಲ, ವಿಜಯಪುರ‌ ನಗರ ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ಯತ್ನಾಳ ಪದೇ ಪದೇ ಹೇಳುತ್ತಾರೆ. ಆದರೆ ಅವರ ಪಿಎಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ‌ಅದಕ್ಕೆ ಹಣ ಎಲ್ಲಿಂದ ಬಂತು? ಗುತ್ತಿಗೆದಾರರು ಹಣ ನೀಡದಿದ್ದರೆ ಅವರ‌ ಕೆಲಸವಾಗುವುದಿಲ್ಲ" ಎಂದು ಉಚ್ಚಾಟಿತ ನಾಯಕ ರವೀಂದ್ರ ಲೋಣಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಜಯಪುರ ನಗರದ ಟಿಕೆಟ್ ಅನ್ನು ಶಾಸಕ ಬಸನಗೌಡ ಯತ್ನಾಳ್‌ಗೆ ನೀಡದೇ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ನೀಡಬೇಕು. ಇಲ್ಲವಾದರೆ ಉಚ್ಚಾಟಿತರು ಹಾಗೂ ಪಕ್ಷದ ನೂರಾರು‌ ಕಾರ್ಯಕರ್ತರು ವಿಧಾನಸಭೆ ಚುನಾವಣೆಯಲ್ಲಿ ತಟಸ್ಥರಾಗಿದ್ದು ಬಿಜೆಪಿಗೆ ಮತ ಹಾಕಬಾರದು ಎಂದು ನಿರ್ಣಯ ಕೈಗೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಇಂದು ದಿಲ್ಲಿಯಲ್ಲಿ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ: ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ?

ಮಾದಿಗ ಸಮುದಾಯದ ಮುಖಂಡ ಹನಮಂತ ಬಿರಾದರ ಮಾತನಾಡಿ, "ಪಕ್ಷದ ಕಾರ್ಯಕರ್ತರ ಜತೆ ಸೇರಿ ಪಕ್ಷದ ಸಂಘಟನೆಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ದುಡಿದಿದ್ದಾರೆ. ಎರಡು ಬಾರಿ ಟಿಕೆಟ್​​ ಕೈ ತಪ್ಪಿದರೂ ಬೇರೆ ಪಕ್ಷಕ್ಕೆ ಹೋಗಲಿಲ್ಲ. ಕಾರ್ಯಕರ್ತರ ಶಕ್ತಿ ಪಟ್ಟಣಶೆಟ್ಟಿ ಶಕ್ತಿಯಾಗಿದೆ. ಅವರಿಗೆ ಟಿಕೆಟ್ ನೀಡಿದರೆ ಹೆಚ್ಚು ಅಂತರದಿಂದ ಗೆಲ್ಲಿಸಿ ಕೊಡುವುದು ನಮ್ಮ ಜವಾಬ್ದಾರಿ. ಹಾಲಿ ಶಾಸಕ ಯತ್ನಾಳರಿಗೆ ಟಿಕೆಟ್ ನೀಡಿದರೆ ನಾವು ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತೇವೆ" ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಎರಡು ಕಡೆ ಸ್ಫರ್ಧೆ: ಕೇಂದ್ರ​ ಚುನಾವಣಾ ಕಮಿಟಿ ಸಭೆಯಲ್ಲಿ ನಾಳೆ ನಿರ್ಧಾರ : ಜಿ ಪರಮೇಶ್ವರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.