ETV Bharat / state

ಕೆಲಸ ನಿರ್ವಹಿಸುತ್ತಿದ್ದ ವೇಳೆ ಪ್ರವಹಿಸಿದ ವಿದ್ಯುತ್: ಕಂಬದಲ್ಲೇ ಲೈನ್‌ಮನ್‌ ಸಾವು - ಲೈನ್ ಮನ್

ಯಂಕಂಚಿ ಗ್ರಾಮದ ತೋಟದಲ್ಲಿ ವಿದ್ಯುತ್​ ಕಂಬದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್​ ಸ್ಪರ್ಶಿಸಿ ಲೈನ್‌ ಮನ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Line man death
ಲೈನ್ ಮನ್​ ಸಾವು
author img

By

Published : May 8, 2020, 12:47 PM IST

ವಿಜಯಪುರ: ವಿದ್ಯುತ್ ಕಂಬದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದಿದೆ.

ಬಸನಗೌಡ ಬಿರಾದಾರ್ (25) ಮೃತ ಗುತ್ತಿಗೆ ನೌಕರ.

ಲೈನ್ ಮನ್​ ಸಾವು

ವಿದ್ಯುತ್ ಕಂಬದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸ್ಥಳದಲ್ಲಿ ಇರಬೇಕಿದ್ದ ಲೈನ್‌ಮನ್​ ಸಂತೋಷ್​ ಕರ್ತವ್ಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂಬ ಆರೋಪ ಕೇಳಿ ಬಂದಿದೆ. ದುರ್ಘಟನೆಯಿಂದ ಕೋಪಗೊಂಡ ಜನರಿಂದ ಯಂಕಂಚಿ ಸೆಕ್ಷನ್​ ಆಫೀಸರ್ ಪ್ರಹ್ಲಾದ್ ಮೇಲೆ ಹಲ್ಲೆ ಯತ್ನವೂ ನಡೆದಿದೆ.

ಘಟನೆಯಿಂದ ರೊಚ್ಚಿಗೆದ್ದ ಜನರಿಂದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿ ಘೇರಾವ್ ಹಾಕಿದ್ದರು. ತಕ್ಷಣ ಪೋಲೀಸರು ಅಧಿಕಾರಿಗಳ ರಕ್ಷಣೆಗೆ ನಿಂತಿದ್ದರು. ಕೆಲಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.