ETV Bharat / state

ಜೈನ್ ಸಮುದಾಯದವರಿಂದ ಬಡ ಸೋಂಕಿತರಿಗೆ ಕೋವಿಡ್ ಸೆಂಟರ್ ಸ್ಥಾಪನೆ.. - Vijayapura

ಕೋವಿಡ್ ಸಮಯದಲ್ಲಿ ಜೈನ್ ಸಮುದಾಯದ ಕಾರ್ಯ ಮಾನವೀಯತೆಯ ಪ್ರತೀಕವಾಗಿದೆ. ಜನತೆಗೆ ಪ್ರಾಣವಾಯು ದೊರಕಿಸುವ ಮಹತ್ವದ ಸೇವಾ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಕೋವಿಡ್ ರೋಗಿಗಳ ಸಂಬಂಧಿಕರು ಜೈನ್ ಸಮಾಜದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ..

Vijayapura
Vijayapura
author img

By

Published : May 18, 2021, 5:39 PM IST

Updated : May 18, 2021, 9:33 PM IST

ವಿಜಯಪುರ : ವ್ಯಾಪಾರ, ವಹಿವಾಟಿಗಾಗಿ ಬೇರೆ ಬೇರೆ ರಾಜ್ಯಗಳಿಂದ ಬಂದು ನಗರದಲ್ಲಿ ವಾಸಿಸುತ್ತಿರುವ ಜೈನ್ ಸಮುದಾಯ ಸಮಾಜಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಿದೆ.

ಈಗಲೂ ಕೊರೊನಾ ಸಂಕಷ್ಟದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೋವಿಡ್ ಸೆಂಟರ್ ಹಾಗೂ ವೈದ್ಯಕೀಯ ಉಪಕರಣ ವ್ಯವಸ್ಥೆ ಮಾಡುವ ಮೂಲಕ ತನ್ನ ಔದಾರ್ಯ ಮನೋಭಾವನೆ ಮೆರೆಯುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಸೊಂಕಿತರಿಗೆ ಬೆಡ್, ಆಕ್ಸಿಜನ್​ ಹಾಗೂ ಸೂಕ್ತ ಔಷಧಿ ದೊರೆಯದೇ ನಿತ್ಯ ಸಂಕಷ್ಟ ಪಡುತ್ತಿದ್ದಾರೆ. ಇದನ್ನು ಅರಿತ ವಿಜಯಪುರದ ಜೈನ್ ಸಮಾಜವು ಐದು ಯೋಜನೆಗಳನ್ನು ಹಾಕಿಕೊಂಡು ಕೊರೊನಾ ವಿರುದ್ದ ಸಮರ ಸಾರಿದೆ.

ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ಹಾಗೂ ಭಾರತೀಯ ಜೈನ್ ಸಂಘಟನೆ, ಜೈನ್ ಸೇವಾ ಮಿಷನ್ ದುಬೈ ಹಾಗೂ ಜೈನ್ ಸಮಾಜದ ವಿವಿಧ ಸಂಘಟನೆಗಳು, ಸಮಸ್ತ ಜೈನ್ ಸಮಾಜ ಇದಕ್ಕೆ ಕೈಜೋಡಿಸಿವೆ.

ವಿಜಯಪುರ ನಗರದಲ್ಲಿ ಸಿದ್ದೇಶ್ವರ ಸಂಸ್ಥೆಯ ಸಹಯೋಗದೊಂದಿಗೆ 100 ಬೆಡ್​ಗಳ ಕೋವಿಡ್ ಐಸೋಲೇಶನ್ ಸೆಂಟರ್ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ. 36 ಆಕ್ಸಿಜನ್ ಸೆಂಟರ್​ಗಳನ್ನು ಕೋವಿಡ್ ಸೋಂಕಿತರಿಗೆ ಕೊಡ ಮಾಡಲಾಗಿದೆ.

ಜೈನ್ ಸಮುದಾಯದವರಿಂದ ಬಡ ಸೋಂಕಿತರಿಗೆ ಕೋವಿಡ್ ಸೆಂಟರ್ ಸ್ಥಾಪನೆ..

2 ಬಿಪಾಪ್ ಮಶಿನ್ ಅಂದರೆ ಮಿನಿ ವೆಂಟಿಲೇಟರ್​ಗಳನ್ನು ಆಸ್ಪತ್ರೆಗೆ ವಿತರಿಸಿದ್ದಾರೆ. ಜೈನ್ ಸಮಾಜದ 50-60 ಯುವಕರು ರಕ್ತದಾನ ಹಾಗೂ ಕೊರೊನಾಗೆ ಅಗತ್ಯವಿರುವ ಪ್ಲಾಸ್ಮಾ ಡೊನೇಟ್ ಮಾಡಿದ್ದಾರೆ. ಅಲ್ಲದೆ ಬಡ ರೋಗಿಗಳಿಗೆ ಕೇವಲ ಹತ್ತು ರೂಪಾಯಿಗಳಲ್ಲಿ ಟ್ಯಾಬ್ಲೆಟ್ ಕಿಟ್ ಕೊಡುತ್ತಿದ್ದಾರೆ‌‌‌.

ಇದರ ಜೊತೆಗೆ ‘ಜಿಲ್ಲೆಯಲ್ಲಿ ಬೃಹತ್ ಆಕ್ಸಿಜನ್ ಬ್ಯಾಂಕ್ ಸ್ಥಾಪನೆ ಮಾಡುವ ಕಾರ್ಯವನ್ನು ಕೈಗೊಳ್ಳುತ್ತಿದೆ. ಈ ಯೋಜನೆಯಡಿಯಲ್ಲಿ ರೋಗಿಗಳ ಅನುಕೂಲಕ್ಕಾಗಿ 5 ಲೀಟರ್ ಸಾಮರ್ಥ್ಯದ 38 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಬಾಡಿಗೆ ನೀಡುತ್ತಿದ್ದಾರೆ.

ಇದಕ್ಕೆ ಯಾವುದೇ ರೀತಿಯ ಶುಲ್ಕ ವಿಧಿಸದೇ ಕೇವಲ ಸಾಗಾಣಿಕೆ ವೆಚ್ಚವಾಗಿ ದಿನಕ್ಕೆ 200 ರೂ. ತೆಗೆದುಕೊಳ್ಳುತ್ತಿದ್ದಾರೆ.

ಅಲ್ಲದೆ ಹೀಗೆ ಬಂದ ಹಣವನ್ನು ಬಡವರಿಗೆ ಹತ್ತು ರೂಪಾಯಿಯಲ್ಲಿ ಔಷಧಿ ಒದಗಿಸಲು ಬಳಸುತ್ತಿದ್ದಾರೆ. ಜೈನ್ ಸಂಘಟನೆಯವರ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಜೈನ್ ಸಮುದಾಯದ ಕಾರ್ಯ ಮಾನವೀಯತೆಯ ಪ್ರತೀಕವಾಗಿದೆ. ಜನತೆಗೆ ಪ್ರಾಣವಾಯು ದೊರಕಿಸುವ ಮಹತ್ವದ ಸೇವಾ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಕೋವಿಡ್ ರೋಗಿಗಳ ಸಂಬಂಧಿಕರು ಜೈನ್ ಸಮಾಜದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಜೈನ್ ಸಮಾಜದ ಈ ಕಾರ್ಯಕ್ಕೆ ಪ್ರೋತ್ಸಾಹಿಸುವ ಮೂಲಕ ಬೆನ್ನೆಲುಬಾಗಿ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನಿಲ್​ ಕುಮಾರ್, ಎಸ್​ಪಿ ಅನುಪಮ್ ಅಗರವಾಲ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ನಿಂತಿದ್ದು, ಆಡಳಿತ್ಮಾತ್ಮಕ ಸಹಾಯ ಮಾಡುತ್ತಿದ್ದಾರೆ.

Last Updated : May 18, 2021, 9:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.