ವಿಜಯಪುರ: ಬಿಜೆಪಿ ತೊರೆದು ಕಾಂಗ್ರೆಸ್ಗೆ ಹೋಗುತ್ತಿದ್ದೇನೆ ಎಂದು ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ ಆಡಿಯೋದಲ್ಲಿನ ಹೇಳಿಕೆ ಕುರಿತಂತೆ ದೇವರಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಸಕ ದೇವಾನಂದ ಚೌಹಾಣ್ ಆಡಿಯೋದಲ್ಲಿ ಮಾತನಾಡಿದಂತೆ ನಾನು ಬಿಜೆಪಿ ತೊರೆಯುವುದಿಲ್ಲ, ಎರಡು ಬಾರಿ ಟಿಕೆಟ್ ನೀಡಿ ಪಕ್ಷದಲ್ಲಿ ಬೆಳೆಸಲು ಅಧ್ಯಕ್ಷ ಯಡಿಯೂರಪ್ಪ ಸಹಕಾರ ನೀಡಿದ್ದಾರೆ. ಹೀಗಿರುವಾಗ ಪಕ್ಷ ಬಿಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಸಚಿವ ಎಂ.ಬಿ.ಪಾಟೀಲ್ ತಂದೆ ಹಾಗೂ ನಮ್ಮ ತಂದೆ ಸ್ನೇಹಿತರು. ಹೀಗಾಗಿ ಅವರ ಜತೆ ಉತ್ತಮ ಒಡನಾಟವಿದೆ. ಹಾಗಂತಾ, ಇದನ್ನು ತಪ್ಪು ಗ್ರಹಿಸುವುದು ಸರಿಯಲ್ಲ ಎಂದರು. ನಿನ್ನೆ ಆಡಿಯೋ ವೈರಲ್ ಆದ ಮೇಲೆ ನನಗೆ ನೆಮ್ಮದಿಯೇ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜತೆ ಮಾತನಾಡಿದ್ದು ಅವರು ಧೈರ್ಯ ಹೇಳಿದ್ದಾರೆ ಎಂದರು.