ETV Bharat / state

ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್​ನಲ್ಲಿ ನನಗೆ ಎಕ್ಸ್​​ಪೀರಿಯನ್ಸ್ ಆಗಿಲ್ಲ: ರಾಗಿಣಿ ದ್ವಿವೇದಿ - Ragini Dwivedi and casting couch

ವಿಜಯಪುರದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ, ಯಾರಾದ್ರೂ ಈ ಬಗ್ಗೆ ಹೇಳಿದ್ರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಆದರೆ, ನಾನು ಮಾತ್ರ ಈ ಥರಹದ ಅನುಭವ ಯಾವತ್ತೂ ಅನುಭವಿಸಿಲ್ಲ ಎಂದರು.

i have not experienced in casting couch; ragini dwivedi
ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ
author img

By

Published : Jun 16, 2021, 10:40 PM IST

ವಿಜಯಪುರ: ಸ್ಯಾಂಡಲ್​ವುಡ್​ನಲ್ಲಿ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ವಿಚಾರ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ ಎಂದು ಚಂದನವನದ ನಟಿ ರಾಗಿಣಿ ದ್ವಿವೇದಿ ಹೇಳಿದರು. ನಗರದಲ್ಲಿ ಮಂಗಳಮುಖಿಯರ ಕೊರೊನಾ ಲಸಿಕೆ ಹಾಕುವ ಮತ್ತು ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

i have not experienced in casting couch; ragini dwivedi
ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ದ್ವಿವೇದಿ

ಇದನ್ನೂ ಓದಿ: ಬ್ರಾಹ್ಮಣ್ಯ ಅವಹೇಳನ ಪ್ರಕರಣ; ಪೊಲೀಸರಿಂದ ನಟ ಚೇತನ್ 4 ತಾಸು ವಿಚಾರಣೆ

ನೀವು ನಡೆಸುವ ಜೀವನದ ಜರ್ನಿ ಮೇಲೆ ಕಾಸ್ಟಿಂಗ್ ಕೌಚ್ ಅನ್ನೋದು ಅವಲಂಬನೆ ಆಗಿರುತ್ತದೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್​ನಲ್ಲಿ ನನಗೆ ಈವರೆಗೂ ಎಕ್ಸ್​ಪೀರಿಯನ್ಸ್ ಆಗಿಲ್ಲ. ಲೈಫ್​ನಲ್ಲಿ ಎರಡು ಥರ ಜೀವನ ಇದೆ. ಒಂದು ಶಾರ್ಟ್ ಕಟ್ ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ಬೆಳೆಯುತ್ತೇವೆ. ಶಾರ್ಟ್ ಕಟ್ ತಗೊಂಡ್ರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ ಎಂದು ಇತ್ತೀಚೆಗೆ ಸಿನಿಮಾ ಪ್ರಪಂಚದಲ್ಲಿ ಕೇಳಿಬರುತ್ತಿರುವ ಕಾಸ್ಟಿಂಗ್ ಕೌಚ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಅತೀ ಶೀಘ್ರದಲ್ಲಿ ನೇಮು-ಫೇಮು, ದುಡ್ಡು ಗಳಿಸೋದನ್ನು ದೂರವಿಟ್ಟು ನಮ್ಮ ಕೆಲಸದ ಮೇಲೆ ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಫೋಕಸ್ ಮಾಡಬೇಕು. 12 ವರ್ಷದಿಂದ ಇಂಡಸ್ಟ್ರೀಯಲ್ಲಿದ್ದೇನೆ. ಕಾಸ್ಟಿಂಗ್ ಕೌಚ್ ಬಗ್ಗೆ ನಾನು ಯಾವತ್ತೂ ನೋಡಿಲ್ಲ. ಯಾರಾದ್ರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು. ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.