ETV Bharat / state

ಹೆಂಡತಿಗೆ ಕೊಡಲಿಯಿಂದ ಹೊಡೆದು ಸಾಯಿಸಿದೆ ಎಂದ್ಕೊಂಡು ಪೊಲೀಸರಿಗೆ ಶರಣಾದ.. ಆದರೆ, ಆಕೆ.. - ಮುದ್ದೇಬಿಹಾಳ ಕೊಡಲಿಯಿಂದ ಹೊಡೆದು ಹೆಂಡತಿ ಕೊಲೆ ಯತ್ನ

ಈ ಹಿಂದೆಯೂ ಸಹ ಮಡಿವಾಳಪ್ಪ ಪತ್ನಿಯ ಶೀಲ ಶಂಕಿಸಿ ಎರಡು ಬಾರಿ ಆಕೆಯ ಕೊಲೆಗೆ ಯತ್ನಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ..

husband-attempts-to-kill-wife-from-axe
ಹೆಂಡತಿ ಕೊಲೆ ಯತ್ನ
author img

By

Published : Aug 13, 2021, 3:17 PM IST

Updated : Aug 13, 2021, 3:22 PM IST

ಮುದ್ದೇಬಿಹಾಳ : ಹೆಂಡತಿಯ ಶೀಲ ಶಂಕಿಸಿದ ಗಂಡನೊಬ್ಬ ಆಕೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿ, ನಂತರ ಆಕೆ ಸತ್ತಿದ್ದಾಳೆಂದು ತಿಳಿದು ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗತನಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆದಿದೆ.

ಮಡಿವಾಳಪ್ಪ ಕಾನ್ಯಾಳ(26) ಎಂಬಾತ ಪೊಲೀಸರಿಗೆ ಶರಣಾದ ಆರೋಪಿ. ಆತನ ಪತ್ನಿ ನೀಲಮ್ಮ ಇದೀಗ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಆರೋಪಿ ಗಂಡ, ಹೆಂಡತಿಗೆ ಕೊಡಲಿಯಿಂದ ಹೊಡೆದಿದ್ದ. ನೀಲಮ್ಮ ನೆಲಕ್ಕೆ ಬಿದ್ದು ಒದ್ದಾಡ ತೊಡಗಿದ್ದಳು. ಆಕೆ ಸತ್ತಳೆಂದು ತಿಳಿದು ಮಡಿವಾಳಪ್ಪ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇನ್ನು, ಜೀವ ಇದ್ದ ನೀಲಮ್ಮಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸದ್ಯ ನೀಲಮ್ಮ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮುದ್ದೇಬಿಹಾಳ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಕೊಂಡಿದ್ದಾರೆ.

ಈ ಹಿಂದೆಯೂ ಸಹ ಮಡಿವಾಳಪ್ಪ ಪತ್ನಿಯ ಶೀಲ ಶಂಕಿಸಿ ಎರಡು ಬಾರಿ ಆಕೆಯ ಕೊಲೆಗೆ ಯತ್ನಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

Last Updated : Aug 13, 2021, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.