ETV Bharat / state

ಹಾಡಹಗಲೇ ಮನೆಗಳ್ಳತನ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು - ವಿಜಯಪುರ ಲೇಟೆಸ್ಟ್​ ಕ್ರೈಂ ನ್ಯೂಸ್​

ಮನೆಯ ಹಿಂಬದಿ ಬಾಗಿಲು ಮುರಿದಿರುವ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಬ್ರಾಹಿಂಪುರದ ಲಕ್ಷ್ಮೀ ನಗರದಲ್ಲಿ ನಡೆದಿದೆ.

house thift at vijaypur
ಹಾಡುಹಗಲೇ ಮನೆಗಳ್ಳತನ..
author img

By

Published : Aug 13, 2020, 3:17 PM IST

ವಿಜಯಪುರ: ಹಾಡಹಗಲೇ ಮನೆಯ ಹಿಂಬದಿ ಬಾಗಿಲು ಮುರಿದಿರುವ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಬ್ರಾಹಿಂಪುರದ ಲಕ್ಷ್ಮೀ ನಗರದಲ್ಲಿ ನಡೆದಿದೆ.

ಹಾಡಹಗಲೇ ಮನೆಗಳ್ಳತನ

ಖಾಸಗಿ ಕಂಪನಿ ಉದ್ಯೋಗಸ್ಥ ಮಲ್ಲಿಕಾರ್ಜುನ ಪಾಟೀಲ ಎಂಬುವರ ಮನೆಗೆ ನುಗ್ಗಿರುವ ಕಳ್ಳರು, ಮನೆಯಲ್ಲಿನ ಅಲ್ಮೇರಾ ಹಾಗೂ ಮಂಚದ ಕೆಳಭಾಗದ ಲಾಕರ್ ಮುರಿದು 105 ಗ್ರಾಂ ಚಿನ್ನಾಭರಣ, 29 ಸಾವಿರ ನಗದು ಹಾಗೂ 800 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ. ಮನೆ ಮಾಲೀಕ ಮಲ್ಲಿಕಾರ್ಜುನ ಪಾಟೀಲ ಕೆಲಸಕ್ಕೆ ಹೋಗಿದ್ದ ವೇಳೆ ಅವರ ಪತ್ನಿ ಅಶ್ವಿನಿ ಮಗು ಕರೆದುಕೊಂಡು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಗಳ ಮನೆಗೆ ಹೋಗಿದ್ದರು. ಈ ವೇಳೆ ಹಿಂಬದಿಯ ಬಾಗಿಲು ಮುರಿದಿರುವ ಕಳ್ಳರು ಒಳಗೆ ನುಗ್ಗಿ ಕೃತ್ಯ ಎಸೆಗಿದ್ದಾರೆ. ಚಿನ್ನಾಭರಣ ದೋಚಿದ ನಂತರ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮನೆಗೆ ಬಂದ ಪತಿ-ಪತ್ನಿ ಮನೆ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಸ್ಥಳ ಪರೀಕ್ಷೆ ನಡೆಸಿದರು. ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.