ವಿಜಯಪುರ: ಕುರಿಗಳ ಮೇಲೆ ವಾಹನ ಹರಿದ ಪರಿಣಾಮ 20 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರನಾಳ ಗ್ರಾಮದ ಬಳಿ ನಡೆದಿದೆ.
ರಸ್ತೆ ಪಕ್ಕದಲ್ಲಿ ಹಾದು ಹೊರಟಿದ್ದ 20 ಕುರಿಗಳ ಮೇಲೆ ಬೊಲೆರೋ ಪಿಕ್ ಅಪ್ ವಾಹನ ಹಾದು ಹೋಗಿದೆ. ಪರಿಣಾಮ ಗೋಪಾಲ ಲೋಖಂಡೆ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ.
ಕುರಿಗಳ ಮೇಲೆ ಹಾಯಿಸಿದ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. 3 ಲಕ್ಷ ರೂ ಸಾಲ ಮಾಡಿಕೊಂಡು 40 ಕುರಿಗಳನ್ನು ತಂದು ಸಾಕುತ್ತಿದ್ದರು. ಈಗ ಇವುಗಳ ಪೈಕಿ 20 ಕುರಿಗಳಷ್ಟೇ ಉಳಿದಿವೆ.
ಇನ್ನು ಕುರಿಗಾಯಿ ಕುಟುಂಬಸ್ಥರು ಕುರಿಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.