ಬೆಂಗಳೂರು : ಪೊಲೀಸ್ ಕಸ್ಟಡಿಯಲ್ಲಿರುವ ಭೂಗತಪಾತಕಿ ರವಿ ಪೂಜಾರಿ ಇರುವ ಎಫ್ಎಸ್ಎಲ್ ಕಟ್ಟಡಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ರವಿ ಪೂಜಾರಿ ಇರುವ ಜಾಗದಲ್ಲಿ ಯಾರನ್ನೂ ಹಿರಿಯ ಅಧಿಕಾರಿಗಳು ಬಿಡುತ್ತಿಲ್ಲ. ಒಳಗೆ ಹೋಗಲು ಮೊಬೈಲ್ ಇಟ್ಟು ಹೋಗಬೇಕು. ಯಾರೂ ಆತನ ಜೊತೆ ಮಾತನಾಡುವಂತಿಲ್ಲ ಎಂದು ಕಿರಿಯ ಸಿಬ್ಬಂದಿಗೂ ಹಿರಿಯ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆ ಸಿಸಿಟಿವಿ ಜತೆ 24 ಗಂಟೆ ಖಾಕಿ ಕಣ್ಗಾವಲು : ತನಿಖಾಧಿಕಾರಿಯನ್ನು ಬಿಟ್ಟು ರವಿ ಪೂಜಾರಿ ಹತ್ತಿರಕ್ಕೆ ಹೋಗಲು ಯಾರಿಗೂ ಪೊಲೀಸರು ಬಿಡುತ್ತಿಲ್ಲ. ಸಮವಸ್ತ್ರದಲ್ಲಿರುವ ಅಧಿಕಾರಿಗಳಿಗೆ ಮಾತ್ರ ಸೆಲ್ ಬಳಿ ಹೋಗಲು ಅವಕಾಶ ನೀಡಲಾಗುತ್ತಿದೆ. ಮಫ್ತಿಯಲ್ಲಿರುವ ಯಾವುದೇ ಸಿಬ್ಬಂದಿಯೂ ಪೂಜಾರಿ ಸೆಲ್ ಬಳಿ ಹೋಗುವಂತಿಲ್ಲ. ಫೋಟೋ, ತನಿಖಾ ಮಾಹಿತಿ ಹೊರ ಹೋಗದಂತೆ ಎಫ್ಎಸ್ಎಲ್ ಸಿಬ್ಬಂದಿಗೂ ಮೌಖಿಕವಾಗಿ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ ಎನ್ನಲಾಗಿದೆ.