ETV Bharat / state

ಗ್ರಾಪಂ ಜನಪ್ರತಿನಿಧಿಗಳಿಗೆ ಗೌರವಧನ‌ ಹೆಚ್ಚಳ ಕೇರಳ ಮಾದರಿಯಲ್ಲಿ ನೀಡಿಲ್ಲ: ಸುನೀಲಗೌಡ ಪಾಟೀಲ - ವಿಧಾನ ಪರಿಷತ್ ಸದಸ್ಯ

ಸರ್ಕಾರ ಗ್ರಾಪಂ ಅಧ್ಯಕ್ಷರಿಗೆ ರೂ 6000, ಉಪಾಧ್ಯಕ್ಷರಿಗೆ ರೂ.‌ 4000 ಮತ್ತು ಸದಸ್ಯರಿಗೆ ತಲಾ 2000 ಮಾಸಿಕ ಗೌರವಧನ ಹೆಚ್ಚಳ ಮಾಡಿದೆ. ಇದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Legislative Council Member Sunil Gowda Patil Sunil Gowda Patil
ವಿಪ ಸದಸ್ಯ ಸುನೀಲಗೌಡ ಪಾಟೀಲ
author img

By

Published : Dec 18, 2022, 8:03 PM IST

ವಿಜಯಪುರ: ಗ್ರಾಮ ಪಂಚಾಯತ್​ ಜನಪ್ರತಿನಿಧಿಗಳಿಗೆ ಗೌರವ ಹೆಚ್ಚಿಸಬೇಕೆಂದು ಸದನದೊಳಗೆ ಹಾಗೂ ಹೊರಗೆ ಹೋರಾಟ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ ಪ್ರಯತ್ನಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ರಾಮ ಪಂಚಾಯತ್​ ಜನಪ್ರತಿನಿಧಿಗಳಿಗೆ ಗೌರವಧನ‌ ಹೆಚ್ಚಳ ಮಾಡಿದೆ. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾ ಪಂ ಜನಪ್ರತಿನಿಧಿಗಳಿಗೆ ಕೇರಳ ಮಾದರಿ ಸೌಲಭ್ಯ ಒದಗಿಸುವಂತೆ ಸದನದೊಳಗೆ ಮತ್ತು ಹೊರಗೆ ಹಲವಾರು ಬಾರಿ ಧ್ವನಿ ಎತ್ತಿ ಹೋರಾಟ ನಡೆಸಿದ್ದೇನೆ. ಈಗ ರಾಜ್ಯ ಸರ್ಕಾರ ಗೌರವ ಧನ ಹೆಚ್ಚಳ ಮಾಡಿದೆ. ಆದರೆ, ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂ ತಾಗಿದೆ ಎಂದು ಅಪಾದಿಸಿದರು.

‌ಈವರೆಗೆ ಗ್ರಾಪಂ ಅಧ್ಯಕ್ಷರಿಗೆ ರೂ. 3000, ಉಪಾಧ್ಯಕ್ಷರಿಗೆ ರೂ. 2000 ಮತ್ತು ಸದಸ್ಯರಿಗೆ ರೂ. 1000 ಗೌರವಧನ ನೀಡಲಾಗುತ್ತಿದೆ. ಈಗ ಸರ್ಕಾರ ಅಧ್ಯಕ್ಷರಿಗೆ ರೂ.‌ 6000, ಉಪಾಧ್ಯಕ್ಷರಿಗೆ ರೂ.‌ 4000 ಮತ್ತು ಸದಸ್ಯರಿಗೆ ರೂ. 2000 ಮಾಸಿಕ ಗೌರವಧನ ಹೆಚ್ಚಳ ಮಾಡಿದೆ. ಇದು ಸರಿಯಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕೇರಳ ಮಾದರಿ ಅಧ್ಯಕ್ಷರಿಗೆ ರೂ. 13000, ಉಪಾಧ್ಯಕ್ಷರಿಗೆ ರೂ. 10000 ಮತ್ತು ಸದಸ್ಯರಿಗೆ ರೂ. 7000 ಮಾಸಿಕ ಗೌರವಧನ ನೀಡಬೇಕು. ಇಲ್ಲದಿದ್ದರೆ, ಮತ್ತೆ ಹೋರಾಟ ಮುಂದುವರಿಸುವುದಾಗಿ ಸುನೀಲಗೌಡ ಪಾಟೀಲ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂಓದಿ:ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದ್ವಿಗುಣಗೊಳಿಸಿ ಸರ್ಕಾರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.