ETV Bharat / state

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಕುರಿತು ಸರ್ಕಾರ ಸಮೀಕ್ಷೆ ನಡೆಸಲಿ: ಎಂ.ಬಿ.ಪಾಟೀಲ್

author img

By

Published : Jul 10, 2022, 2:11 PM IST

ವಿಜಯಪುರದ ತಿಕೋಟಾ ಭಾಗದಲ್ಲಿ 4.9 ತೀವ್ರತೆಯ ಭೂಕಂಪನ ದೃಢವಾಗಿದೆ. ಈ ಕುರಿತು ಸರ್ಕಾರ ಸಮೀಕ್ಷೆ ನಡೆಸಲಿ ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

M.B Patil
ಎಂ.ಬಿ ಪಾಟೀಲ್

ವಿಜಯಪುರ: ಜಿಲ್ಲೆಯಲ್ಲಿ ಭೂಕಂಪನ ಕುರಿತು ಹೆಚ್ಚಿನ ಪರೀಕ್ಷೆಯಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಒತ್ತಾಯಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಬಳಕೆಯಿಂದ ಜನರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದರು.

ವಿಜಯಪುರದ ತಿಕೋಟಾ ಭಾಗದಲ್ಲಿ 4.9 ತೀವ್ರತೆಯ ಭೂಕಂಪನ ದೃಢವಾಗಿದೆ. ಭೂಕಂಪನ ಅನುಭವ ನನಗೂ ಆಗಿದೆ. ಜನರಲ್ಲಿ ಆತಂಕವಿದೆ. ಬಹಳ ವರ್ಷಗಳಿಂದ ತಿಕೋಟಾ ಹಾಗೂ ಸುತ್ತಮುತ್ತಲ ಭಾಗದಲ್ಲಿ ಈ ರೀತಿ ಆಗುತ್ತಿದೆ. ಘಟನೆಯ ಕುರಿತು ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದೇನೆ. ಭೂಕಂಪವಾದ ಪ್ರದೇಶದಲ್ಲಿ ಕೆಲ ಮಾಪನಗಳನ್ನು ಹಿಂದೆ ಹಾಕಲಾಗಿತ್ತು. ವಿಪತ್ತು ನಿರ್ವಹಣೆ ತಂಡದ ಜೊತೆಗೂ ಚರ್ಚೆ ಮಾಡಿದ್ದೇನೆ. ಜನರು ಆತಂಕಗೊಳ್ಳಬಾರದು ಎಂದು ಮನವಿ ಮಾಡಿದರು.

ಸಿದ್ದರಾಮೋತ್ಸವ ಆಯೋಜನೆ ಮಾಡಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆ ನಿಮಿತ್ತ ಸಿದ್ದರಾಮೋತ್ಸವ ಆಯೋಜನೆ ಮಾಡಿಲ್ಲ. ಅದು ಸಿದ್ದರಾಮೋತ್ಸವ ಅಲ್ಲ. ನೀವು ಸಿದ್ದರಾಮೋತ್ಸವ ಮಾಡಿದ್ದೀರಿ. ಸಿದ್ದರಾಮೋತ್ಸವ ಅಂದರೂ ತಪ್ಪಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.