ವಿಜಯಪುರ : ಕೆಳಗೆ ಜೋತು ಬಿದ್ದ ವಿದ್ಯುತ್ ಕಂಬದ ತಂತಿಗಳು ತಾಗಿ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ರವೀಂದ್ರ ಅರಕೇರಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಇವರು ತಮ್ಮ 4 ಎಕರೆಯಲ್ಲಿ 1.20 ಲಕ್ಷ ರೂ. ಖರ್ಚು ಮಾಡಿ ಕಬ್ಬು ಬೆಳೆದಿದ್ದರು. ಇಂದು ಕೆಳಗೆ ಜೋತು ಬಿದ್ದ ವಿದ್ಯುತ್ ತಂತಿಗಳು ತಾಗಿ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯ್ತು. ಆದರೂ ಸಹ ಸುಮಾರು ಬೆಳೆ ಬೆಂಕಿಗೆ ಆಹುತಿಯಾಗಿದೆ.
![fire to cane crop by electrical wires](https://etvbharatimages.akamaized.net/etvbharat/prod-images/kn-vjp-02-sugar-cane-fire-av-7202140_02012021170651_0201f_1609587411_137.jpg)
ಈ ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ರೈತ ಆರೋಪಿಸಿದ್ದಾನೆ. ವಿದ್ಯುತ್ ಲೈನ್ಗಳು ಬೆಳೆಗೆ ತಾಗುತ್ತಿವೆ ಎಂದು ಈ ಹಿಂದೆಯೇ ಅಕ್ಟೋಬರ್‌ನಲ್ಲಿ ಮನವಿ ಕೊಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇಲಾಖೆಯೇ ನಷ್ಟ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.