ಮುದ್ದೇಬಿಹಾಳ: ಪಟ್ಟಣದ ಕಾಯಿಪಲ್ಯೆ ಮಾರುಕಟ್ಟೆಗೆ ತೆರಳುವ ಕೆರೆ ಸಮೀಪದಲ್ಲಿರುವ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳಾಗಿದ್ದನ್ನು ಈಟಿವಿ ಭಾರತ ವರದಿ ಮಾಡಿತ್ತು. ಸದ್ಯ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಗುಂಡಿ ಮುಚ್ಚಿಸಿ ಡಾಂಬರೀಕರಣ ಮಾಡಿಸಿದ್ದಾರೆ.
ಒಳಚರಂಡಿ ಕಾಮಗಾರಿ ಮುಗಿದ ನಂತರ ರಸ್ತೆ ಮಧ್ಯದಲ್ಲಿ ಚೇಂಬರ್ ನಿರ್ಮಿಸಿ, ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಆರೆಂಟು ತಿಂಗಳಲ್ಲಿ ರಸ್ತೆಯಲ್ಲಿ ಗುಂಡಿಗಳಾಗಿದ್ದವು. ಈ ಬಗ್ಗೆ ಈಟಿವಿ ಭಾರತದಲ್ಲಿ ಜು.30 ರಂದು ವರದಿ ಪ್ರಕಟವಾಗಿತ್ತು.
ದೊಡ್ಡ ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್‌ಗಳು ಕೂಡಾ ಕಿತ್ತು ಹೋಗಿದ್ದು, ಅಂಗೈಯಲ್ಲಿ ಜೀವ ಹಿಡಿದುಕೊಂಡು ಸವಾರರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಯುಜಿಡಿ ಅಧಿಕಾರಿ ರಾಮರಾವ ರಾಠೋಡ ಅವರು ಕಾರ್ಮಿಕರಿಗೆ ಸೂಚಿಸಿ, ಕೆಜಿಎಸ್ ನಂ.2 ಶಾಲೆಯಿಂದ ಇಂದಿರಾ ವೃತ್ತದವರೆಗಿನ ರಸ್ತೆಗೆ ಗುಂಡಿ ಮುಚ್ಚಿಸಿ ಡಾಂಬರೀಕರಣ ಮಾಡಿಸಿದ್ದಾರೆ. ವರದಿ ಪ್ರಸಾರ ಮಾಡಿದ ಈ ಟಿವಿ ಭಾರತಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.