ವಿಜಯಪುರ: ಶಾಸಕರ ಅನುದಾನದಲ್ಲಿ 18 ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ನಾಗಠಾಣಾ ಶಾಸಕ ದೇವಾನಂದ ಚವ್ಹಾಣ್ ವಿತರಿಸಿದರು.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಶಾಸಕರ ಕಾರ್ಯಾಲಯ ಮುಂಭಾಗದಲ್ಲಿ ವಿಕಲಚೇತನರಿಗೆ 2019-2೦ನೇ ಸಾಲಿನ ವಾಹನ ವಿತರಣೆ ಮಾಡಿದರು. ಶಾಸಕರ ಅನುದಾನದಡಿಯಲ್ಲಿ ತಲಾ ಒಂದು ವಾಹನಕ್ಕೆ 68 ಸಾವಿರ ರೂ. ನೀಡಿ ಖರೀದಿ ಮಾಡಲಾಗಿತ್ತು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಾಹನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಬಳಿಕ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ್, ವಿಕಲಚೇತನರ ಅನುದಾನದ 20 ಅನುದಾನ ಬಳಕೆ ಮಾಡಿಕೊಂಡು ಪಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ಇನ್ನೂ ಬರುವ ದಿನಗಳಲ್ಲಿ ಇನ್ನುಳಿದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಜಯಪುರ ತಹಶೀಲ್ದಾರ್ ಮೀನಾಕುಮಾರಿ ಫಲಾನುಭವಿಗಳಿಗೆ ತ್ರಿಚಕ್ರದ ವಾಹನ ಕೀ ವಿತರಣೆ ಮಾಡಿದರು. ಸಾಮಾಜಿಕ ಅಂತರ ಕಾಯ್ದಕೊಂಡು ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.