ETV Bharat / state

Vijayapura crime: ಕುಡಿತದ ಚಟ ಬಿಡದ ಮಗ.. ತಂದೆಯಿಂದಲೇ ಪುತ್ರನ ಬರ್ಬರ ಕೊಲೆ - Father kills son at Vijayapura

ಜನ್ಮ ನೀಡಿದ ತಂದೆಯೇ ಮಗನನ್ನು ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ.

Vijayapura
ವಿಜಯಪುರ
author img

By

Published : Jul 10, 2023, 6:15 PM IST

ವಿಜಯಪುರ: ಮಗನ ಕುಡಿತ ಬಿಡಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲವೆಂದು ಕೋಪಗೊಂಡು ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮುತ್ತಪ್ಪ ಮಸಳಿ (38) ಹತ್ಯೆಯಾಗಿರುವ ವ್ಯಕ್ತಿ. ಬಸಪ್ಪ ಮಸಳಿ ಹತ್ಯೆಗೈದಿರುವ ಆರೋಪಿತ ತಂದೆ. ಸಲಿಕೆಯಿಂದ ಹೊಡೆದು ತನ್ನ ಜಮೀನಿನಲ್ಲಿ ಮಗನನ್ನು ಹತ್ಯೆ ಮಾಡಿದ್ದಾನೆ. ಮದ್ಯ ಬಿಡುವಂತೆ ಮುತ್ತಪ್ಪಗೆ ತಂದೆ ಬಸಪ್ಪ ಬುದ್ಧಿವಾದ ಹೇಳುತ್ತಿದ್ದರಂತೆ. ಆದರೆ ಮಗ ಮಾತು ಕೇಳದೆ ಜಮೀನಿನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವೆ ಮಾಡಿದ್ದನಂತೆ. ಇದರಿಂದ ಕೋಪಗೊಂಡು ಮಗನನ್ನು ತಂದೆಯೇ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಕು ಇರಿದ ತಂದೆ, ಹಾರಿಹೋಯ್ತು ಮಗನ ಪ್ರಾಣ

ತಂದೆಯಿಂದಲೇ ಮಗನ ಬರ್ಬರ ಹತ್ಯೆ: ಇತ್ತೀಚೆಗೆ ತಂದೆಯೊಬ್ಬ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ನಡೆದಿತ್ತು. ಜಿನ್ನಪ್ಪಾ ಕಾಂಜಿ ಕೊಲೆ ಆರೋಪಿ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದ ವ್ಯಕ್ತಿ. ಜಿನ್ನಪ್ಪ ಕಾಂಜಿ ಮಗನ ತಲೆಯ ಹಿಂಭಾಗಕ್ಕೆ ಹರಿತ ಆಯುಧದಿಂದ ಹೊಡೆದು ಕೃತ್ಯ ಎಸಗಿದ್ದ ಎಂದು ವರದಿಯಾಗಿತ್ತು.

ಇದನ್ನೂ ಓದಿ: ನಡುರಸ್ತೆಯಲ್ಲೇ ಬಿಜೆಪಿ ಮುಖಂಡರೊಬ್ಬರ ಪುತ್ರನ ಬರ್ಬರ ಹತ್ಯೆ: ವಿಡಿಯೋ ವೈರಲ್​

ಘಟನೆಯ ವಿವರ: ಭರತೇಶ್ ಕಾಂಜಿ ಮದ್ಯ ವ್ಯಸನಿ ಆಗಿದ್ದು ನಿತ್ಯ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡುತ್ತಿದ್ದ. ಪದೇ ಪದೇ ಜಗಳವಾಡುತ್ತಿದ್ದ. ಇವತ್ತು ಜಗಳ ತಾರಕಕ್ಕೇರಿದೆ. ಕುಪಿತಗೊಂಡ ಜಿನ್ನಪ್ಪ ತನ್ನ ಕೈಯಲ್ಲಿದ್ದ ಹರಿತವಾದ ಆಯುಧದಿಂದ ಭರತೇಶ್ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಭರತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.

ಇತ್ತೀಚಿನ ಅಪರಾಧ ಪ್ರಕರಣಗಳನ್ನು ನೋಡುವುದಾದರೆ

  • ಮಗನಿಗೆ ಗುಂಡಿಕ್ಕಿದ ತಂದೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಪುತ್ರ ನಿರೆನ್ (28) ಹತ್ಯೆಗೈದು ತಂದೆ ನಂದೇಟಿರ ಚಿಟ್ಟಿಯಪ್ಪ ಪೊಲೀಸರಿಗೆ ಶರಣಾಗಿದ್ದರು.
  • ತಾಯಿಯನ್ನೇ ಕೊಂದ ಮಗ: ಓದುವಾಗ ಮೊಬೈಲ್​ ನೋಡುತ್ತ ಕುಳಿತಿದ್ದರಿಂದ ಬೈದು, ಕೆನ್ನೆಗೆ ಎರಡು ಬಾರಿಸಿದ ತಾಯಿಯನ್ನೇ ಮಗನೋರ್ವ ಕೊಲೆ ಮಾಡಿರುವ ಘಟನೆ ಇತ್ತೀಚೆಗೆ ಮಹರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಕೃತ್ಯದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಂತೆ ಆತ ಬಿಂಬಿಸಿದ್ದ. ಪುಣೆಯ ಉರ್ಲಿ ಕಾಂಚನ್​ ನಿವಾಸಿ 37 ವರ್ಷದ ತಸ್ಲೀಮ್​ ಶೇಖ್​ ಎಂಬ ಮಹಿಳೆ ಮಗನಿಂದ ಕೊಲೆಯಾಗಿದ್ದರು. ಆರೋಪಿ ಜಿಶಾನ್​ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ತಂದೆಯಿಂದಲೇ ಮಗನ ಬರ್ಬರ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.