ETV Bharat / state

ವಿಜಯಪುರ: ಪೊಲೀಸ್ ಕಾನ್ಸಟೆಬಲ್​ಗೂ ತಗುಲಿದ ಕೊರೊನಾ ಸೋಂಕು - Jalangarh Police Station Vijayapur

ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ವರ್ಷದ ಪೊಲೀಸ್​ ಕಾನ್ಸ್​ಟೆಬಲ್​ ಈಗ ಕೊರೊನಾ ಸೋಂಕು ತಗುಲಿದೆ.

vijayapura
ಜಲನಗರ ಪೊಲೀಸ್ ಠಾಣೆ
author img

By

Published : Jun 14, 2020, 3:22 PM IST

ವಿಜಯಪುರ: ನಗರದ ಮನಗೂಳಿ ರಸ್ತೆಯ ಜಲನಗರದ ಪೊಲೀಸ್ ಕಾನ್ಸ್​​ಟೆಬಲ್​ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು‌ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ಜಲನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ವರ್ಷದ ಪೊಲೀಸ್​ ಕಾನ್ಸಟೆಬಲ್​ ಈಗ ಕೋವಿಡ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಕಳೆದ ಮೂರು ತಿಂಗಳಿಂದ ಕಂಟೈನ್​ಮೆಂಟ್ ಪ್ರದೇಶವಾಗಿರುವ ಚಪ್ಪರಬಂದ್ ಕಾಲೊನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಪ್ರದೇಶದಿಂದ ಜಿಲ್ಲೆಯಲ್ಲಿ ಮೊದಲು ಸೋಂಕು ಪತ್ತೆಯಾಗಿತ್ತು.

ಪೊಲೀಸ್ ಕಾನ್ಸಟೆಬಲ್​ಗೂ ತಗುಲಿದ ಕೊರೊನಾ ಸೋಂಕು

ಕೊರೊನಾ ವೈರಸ್ ಬೇರೆ ಪೊಲೀಸರಿಗೆ ಹರಡದಂತೆ ಮುನ್ನೆಚ್ಚರಿಕೆಯಾಗಿ ಠಾಣೆಯನ್ನು ಸ್ಯಾನಿಟೈಸರ್​ನಿಂದ ಶುಚಿಗೊಳಿಸಲಾಗಿದೆ. ಪಕ್ಕದ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಆದರೂ ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋಗಲು ಹೆದರುವಂತಾಗಿದೆ.

ಪೊಲೀಸ್ ಕಾನ್ಸ್​​ಟೆಬಲ್​ಗೆ ಕೊರೊನಾ ಸೋಂಕು ತಗುಲಿದ ಕಾರಣ ಪೊಲೀಸ್ ಠಾಣೆಯಲ್ಲಿದ್ದ 37 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅವರ ಜೊತೆ ಕಾನ್ಸಟೆಬಲ್ ಪತ್ನಿ, ಮಕ್ಕಳು ಹಾಗೂ ಅವರ ಸಂಪರ್ಕದಲ್ಲಿರುವವರನ್ನು ಸಹ ಕ್ವಾರಂಟೈನ್​ ಮಾಡಲಾಗಿದೆ.

ಇತ್ತೀಚೆಗೆ ರಾಜ್ಯದ ಎಲ್ಲಾ ಪೊಲೀಸರು, ಉನ್ನತ ಅಧಿಕಾರಿಗಳ ಗಂಟಲು ದ್ರವ ಪರೀಕ್ಷೆ ನಡೆಸಬೇಕು ಎನ್ನುವ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ 8 ಪೊಲೀಸ್ ಠಾಣೆಗಳ 250ಕ್ಕೂ ಸಿಬ್ಬಂದಿಗೆ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ಒಬ್ಬ ಪೊಲೀಸ್ ಕಾನ್ಸ್​​ಟೆಬಲ್​ಗೆ ಸೋಂಕು ತಗುಲಿದೆ. 100ಕ್ಕೂ ಹೆಚ್ಚು ಸಿಬ್ಬಂದಿಯ ಪರೀಕ್ಷಾ ವರದಿ ಬರಲಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.