ETV Bharat / state

2024ಕ್ಕೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ - ಯುಪಿ ಸಿಎಂ ಯೋಗಿ ಆದಿತ್ಯನಾಥ

ಧರ್ಮ ಆಧಾರಿತ ಮೀಸಲಾತಿ ಕೊಡುವ ಮನೋಭಾವ ಭಾರತದ ಹಿತಕ್ಕೆ ಮಾರಕವಾಗಿದೆ. ಅದು ಅಸಂವಿಧಾನಿಕವಾಗಿದ್ದು, ಹೀಗಾಗಿ ಬಿಜೆಪಿ ಧಾರ್ಮಿಕ ಆಧಾರಿತ ಮೀಸಲಾತಿ ಕೊಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

Uttar Pradesh Chief Minister Yogi Adityanath spoke.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡಿದರು.
author img

By

Published : Apr 27, 2023, 7:54 AM IST

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಷಣ

ವಿಜಯಪುರ: ಈಗಾಗಲೇ ಧರ್ಮದ ಹೆಸರಿನಲ್ಲಿ ದೇಶ ಇಬ್ಭಾಗವಾಗಿದೆ. ಈಗ ಧರ್ಮದ ಹೆಸರಿನಲ್ಲಿ ಹುಡುಗಾಟ ಆಡಲು ಯಾರಿಗೂ ಬಿಡುವುದಿಲ್ಲ. ಟೀಂ ಇಂಡಿಯಾ ರೀತಿ ಏಕ ಭಾರತ-ಶ್ರೇಷ್ಠ ಭಾರತ ಸಂಕಲ್ಪ ಮಾಡಿಕೊಳ್ಳಬೇಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದರು.

ಬಸವನ ಬಾಗೇವಾಡಿಯಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮ ಆಧಾರಿತ ಮೀಸಲಾತಿ ಕೊಡುವ ಮನೋಭಾವ ಭಾರತದ ಹಿತಕ್ಕೆ ಮಾರಕವಾಗಿದೆ. ಧಾರ್ಮಿಕ ಆಧಾರಿತ ಮೀಸಲಾತಿ ಅಸಂವಿಧಾನಿಕ. ಹೀಗಾಗಿ ಭಾರತೀಯ ಜನತಾ ಪಕ್ಷ ಧಾರ್ಮಿಕ ಆಧಾರಿತ ಮೀಸಲಾತಿ ಯಾವತ್ತೂ ಕೊಡುವುದಿಲ್ಲ ಎಂದು ಹೇಳಿದರು.

ವಿಶ್ವದ ದೊಡ್ಡ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ. ನಮ್ಮನ್ನಾಳಿದ ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಮುನ್ನುಗ್ಗುತ್ತಿದೆ. ಕರ್ನಾಟಕ-ಉತ್ತರ ಪ್ರದೇಶ ಸಾವಿರಾರು ವರ್ಷಗಳಿಂದ ಸ್ನೇಹ ಸೂತ್ರದಲ್ಲಿ ಇವೆ. ಪ್ರಧಾನಮಂತ್ರಿಯವರ ಏಕ ಭಾರತ ಶ್ರೇಷ್ಠ ಭಾರತ ಎನ್ನುವ ಆಶಯಕ್ಕೆ ಉತ್ತಮ ಉದಾಹರಣೆ ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ.

ರಾಮನ ಪರಮಭಕ್ತ ಆಂಜನೇಯ ಸ್ವಾಮಿ ಕರ್ನಾಟಕದಲ್ಲಿಯೇ ಜನಿಸಿದವರು. ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 2024 ರಲ್ಲಿ ಶ್ರೀ ರಾಮಮಂದಿರದ ಲೋಕಾರ್ಪಣೆ ನಡೆಯಲಿದೆ. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ನೀವೆಲ್ಲರೂ ಬನ್ನಿ ಎಂದು ಆಹ್ವಾನ ನೀಡಿದರು.

ಕಾಂಗ್ರೆಸ್ ಕೇವಲ ತುಷ್ಟೀಕರಣಕ್ಕೆ ಆದ್ಯತೆ ನೀಡಿದೆ. ಆದರೆ ಪ್ರತಿಯೊಬ್ಬ ನಾಗರಿಕರನ್ನು ಸಶಕ್ತೀಕರಣ ಮಾಡಲು ಆದ್ಯತೆ ನೀಡುತ್ತೇವೆ. ಮಾಹಿತಿ ತಂತ್ರಜ್ಞಾನದ ಹೆಸರು ಬಂದಾಗ ಕರ್ನಾಟಕದ ಬೆಂಗಳೂರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಬೌದ್ಧಿಕ, ತಾಂತ್ರಿಕ ಶಿಕ್ಷಣದ ಕೇಂದ್ರವಾಗಿ ನವಭಾರತ ಮಿಂಚುತ್ತಿದೆ. ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯದ ಜ್ಞಾನಪರಂಪರೆ ಯುವಜನತೆ ಮೈಗೂಡಿಸಿ ಕೊಳ್ಳುವಂತಾಗಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳು ವಿಕಾಸಕ್ಕೆ ಆದ್ಯತೆ ನೀಡುವುದಿಲ್ಲ. ಜೆಡಿಎಸ್, ಕಾಂಗ್ರೆಸ್‌ಗೆ ನೀತಿ, ನಿಯತ್ತು ಇಲ್ಲ. ಯಾವ ದೃಷ್ಟಿಕೋನವೂ ಎರಡು ಪಕ್ಷಗಳಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಅನ್ನದಾತ ತಲೆ ತಗ್ಗಿಸಿ ನಡೆಯುತ್ತಿದ್ದನು. ಆದರೆ ಕಿಸಾನ್ ಸಮ್ಮಾನ ಯೋಜನೆಯಿಂದ ಪ್ರತಿಯೊಬ್ಬ ಅನ್ನದಾತನು ತಲೆ ಎತ್ತಿ ನಡೆಯುವಂಥ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಕೇವಲ ಪಂಚ ವಾರ್ಷಿಕ ಯೋಜನೆ ಮಾತ್ರ ನೀಡಿದೆ. ಮೊದಲು ಐದು ವರ್ಷ ಯೋಜನೆ ರೂಪುರೇಷೆ, ಐದು ವರ್ಷದ ನಂತರ ಅನುದಾನ ಬಿಡುಗಡೆ. ಆದರೆ ಆ ಪಂಚವಾರ್ಷಿಕ ಯೋಜನೆಗಳು ಅನುಷ್ಠಾನ ಆಗುತ್ತ ಇರಲಿಲ್ಲ. ಆದರೆ ಮೋದಿ ನೇತೃತ್ವದ ಸರ್ಕಾರ ಶಿಲಾನ್ಯಾಸ ನೆರವೇರಿಸಿ, ಘೋಷಣೆ ಮಾಡಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಜಲ ಹೀ ಜೀವನ ಹೈ, ಪರ್ ಜಲ್ ಮಿಲತಾ ನಹೀ ತಾ.... ಇಂದು ಕರ್ನಾಟಕದ ಪ್ರತಿ ಮನೆಗೂ ನಳದ ಸಂಪರ್ಕವಿದೆ. ಡಬಲ್ ಎಂಜಿನ್ ಸರ್ಕಾರ ಇಂದು ಪ್ರತಿ ಮನೆಗೂ ನೀರು ತಲುಪುಸುತ್ತಿದೆ. ಇದು ಅತ್ಯಂತ ಅಭಿನಂದನಾರ್ಹ ಕಾರ್ಯ ಎಂದು ಯೋಗಿ ಶ್ಲಾಘಿಸಿದರು.

ಬಸವಜನ್ಮಭೂಮಿಗೆ ನಮನ: ಬಸವ ಜನ್ಮಭೂಮಿಗೆ ಆಗಮಿಸಿ ಪಾವನನಾಗಿದ್ದೇನೆ. ಬಸವಣ್ಣನವರು ಶತಶತಮಾನಗಳ ಹಿಂದೆ ಪಾರ್ಲಿಮೆಂಟ್ ರೂಪಿಸಿದ್ದರು. ಪರಿಣಾಮವಾಗಿ ಭಾರತ ವಿಶ್ವದ ದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿದೆ. ಜಗಜ್ಯೋತಿ ಬಸವೇಶ್ವರರು ಕಾಯಕವೇ ಕೈಲಾಸ ಎಂದು ಸಾರಿ ಮಾನವೀಯತೆ ಸೇವೆ ಮಾಡುವ ಪ್ರೇರಣೆ ನೀಡಿದರು. ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದರು ಎಂದರು.

ಮಾಜಿ ಸಚಿವ ಹಾಗೂ ಬಸವನ ಬಾಗೇವಾಡಿ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಕುಚಬಾಳ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಚಿದಾನಂದ ಚಲವಾದಿ ಮೊದಲಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಬಿಜೆಪಿ 135 ಸ್ಥಾನ ಗೆದ್ದು ಸಂಪೂರ್ಣ ಬಹುಮತ ಪಡೆಯಲಿದೆ: ರಾಜೀವ್ ಬಬ್ಬರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.