ಮುದ್ದೇಬಿಹಾಳ: ತವರಿನಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಬರಲು ತೆರಳಿದ್ದ ಪತಿ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಮ್ಮಲದಿನ್ನಿ-ಹೊಕ್ರಾಣಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಹಡಲಗೇರಿ ಗ್ರಾಮದ ನಿಂಗಯ್ಯ ಮಡಿವಾಳಯ್ಯ ಹಿರೇಮಠ (35) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ. ತಡರಾತ್ರಿ ಹಡಲಗೇರಿಯಿಂದ ಪತ್ನಿ ತವರು ಮನೆ ತಾಳಿಕೋಟೆಯ ಮಾಳನೂರಿಗೆ ನಿಂಗಯ್ಯ ಹೊರಟಿದ್ದ. ಅತಿ ವೇಗದ ಕಾರಣ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಹೊಲದಲ್ಲಿ ಪಲ್ಟಿಯಾಗಿ ಬಿದ್ದಿದೆ.
ಓದಿ: ದಾಖಲೆ ಬೆಲೆಗೆ ಕಿಲಾರಿ ಹೋರಿ ಮಾರಾಟ! ತವರುಮನೆಗೆ ಮಗಳ ಕೊಡುವ ರೀತಿ ಬೀಳ್ಕೊಟ್ಟ ರೈತ!
ತಾಳಿಕೋಟೆ ಪಿಎಸ್ಐ ಶಿವಾಜಿ ಪವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.