ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಹೊರ ವಲಯದ ಬನ್ನಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.
ಬಿದರಕುಂದಿ ಗ್ರಾಮದ ಶಿವರಾಜ ಮಹಾಂತೇಶ ಚಿನಿವಾರ ಸಾವನ್ನಪ್ಪಿದ ಯುವಕ. ಈತನ ಶವ ಮರದ ಸುತ್ತಲೂ ಮುಳ್ಳುಕಂಟಿಗಳಿಂದ ಆವರಿಸಿದ್ದು, ದೂರದಿಂದ ಗಿಡಕ್ಕೆ ಬೆನ್ನು ತಾಗಿಸಿ ನಿಂತುಕೊಂಡಿರುವಂತೆ ಕಾಣಿಸುತ್ತಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ.