ವಿಜಯಪುರ: ಬೊಲೆರೋ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಬಲೇಶ್ವರ ತಾಲೂಕಿನ ಯಕ್ಕುಂಡಿ-ಅರ್ಜುನಗಿ ಗ್ರಾಮದ ಮಧ್ಯೆ ಸಂಭವಿಸಿದೆ.
ಅಪಘಾತದಲ್ಲಿ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ತುಕಾರಾಂ (48) ಮತ್ತು ಯಕ್ಕುಂಡಿ ಗ್ರಾಮದ ಹನುಮಂತ ಮೂಡಲಗಿ (50) ಎಂಬುವರು ಸಾವನ್ನಪ್ಪಿದವರು ಎನ್ನಲಾಗಿದೆ.
![ವಿಜಯಪುರದಲ್ಲಿ ವಾಹನ ಅಪಘಾತ ಸುದ್ದಿ, Bolero Bike accident in vijayapura](https://etvbharatimages.akamaized.net/etvbharat/prod-images/5186517_bnailvjp.jpg)
ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನಕ್ಕೆ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.