ETV Bharat / state

ಮಹಾನಗರ ಪಾಲಿಕೆಗೆ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ ಯತ್ನಾಳ್​​ - ಈಟಿವಿ ಭಾರತ ಕನ್ನಡ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವೇಳೆ ಸಾಕಷ್ಟು ಹೆಸರುಗಳು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆಗೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.‌

bjpleader-basanagowda-patil-yathnal-statement-on-voter-id-scam-allegations
ಮಹಾನಗರ ಪಾಲಿಕೆಗೆ ಮತದಾರ ಪಟ್ಟಿ ಪರಿಷ್ಕರಣೆ ಮಾಡುವಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ ಯತ್ನಾಳ್​​
author img

By

Published : Nov 21, 2022, 5:34 PM IST

Updated : Nov 21, 2022, 5:47 PM IST

ವಿಜಯಪುರ: ಮಹಾನಗರ ಪಾಲಿಕೆಗೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.‌

ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮತದಾರ ಪಟ್ಟಿ ಪರಿಷ್ಕರಣೆ ಅಕ್ರಮದ ಕಾಂಗ್ರೆಸ್ ಆರೋಪದ ಕುರಿತು ಮಾತನಾಡಿದ ಅವರು, ನಮ್ಮ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವೇಳೆ ಸಾಕಷ್ಟು ಹೆಸರುಗಳು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆಗೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ. ಹಾಗಾಗಿ ಬದುಕಿದ್ದವರು ಸತ್ತಿದ್ದಾರೆ, ಸತ್ತವರು ಬದುಕಿದ್ದಾರೆ ಎಂಬಂತೆ ಆಗಿದೆ ಎಂದರು.

ಇದು ಯಾವುದೋ ಒಂದೇ ಕಮ್ಯೂನಿಟಿಗೆ ಆಗಿದ್ದಲ್ಲಾ. ಮುಸ್ಲಿಂ ಮತ್ತು ಹಿಂದೂಗಳದ್ದು ಇದೇ ರೀತಿ ಆಗಿವೆ. ವಿಧಾನಸಭೆ ಚುನಾವಣೆಗೆ ಕಂದಾಯ ಇಲಾಖೆಯವರು ಮಾಡ್ತಾರೆ, ಅವರು ವ್ಯವಸ್ಥಿತವಾಗಿ ಮಾಡ್ತಾರೆ ಎಂದರು. ಈಗ ಆಪ್ ಬಂದಿದೆ, ದೇಶದಲ್ಲಿ ಯಾವುದೋ‌ ಮೂಲೆಯಲ್ಲಿ ಸೇರಿ ಎರಡೆರಡು ವೋಟರ್ ಐಡಿ ಇದ್ರೂ ಡಿಲೀಟ್ ಆಗ್ತಾವೆ. ಇನ್ನು ಹದಿನೈದು ದಿನದಲ್ಲಿ ರಾಷ್ಟ್ರೀಯ ಆ್ಯಪ್ ಬರೋದಿದೆ. ಅದು ಬಂದರೆ ಒಬ್ಬ ಮತದಾರ ಕಾಶ್ಮೀರದಲ್ಲೂ ಹಾಗೂ ವಿಜಯಪುರದಲ್ಲೂ ವೋಟರ್​ ಐಡಿ ಮಾಡಿಸಿದರೆ ಅದು ಗೊತ್ತಾಗುತ್ತದೆ. ಒಂದು ಕಡೆ ವೋಟರ್​ ಐಡಿ ಮಾಡಿದ್ರೆ ಇನ್ನೊಂದು ಕಡೆ ತಾನಾಗೇ ಆಗಿ ಡಿಲೀಟ್​ ಆಗುತ್ತದೆ ಎಂದರು.

ಮಹಾನಗರ ಪಾಲಿಕೆಗೆ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ ಯತ್ನಾಳ್​​

ಪೊಲೀಸರ ತನಿಖೆಗೆ ಮುಕ್ತ ಅವಕಾಶ ನೀಡಬೇಕು : ಮಂಗಳೂರಿನಲ್ಲಿ ನಡೆದ ಬಾಂಬ್​​ ಸ್ಫೋಟ ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿದ ಅವರು, ಪೊಲೀಸರ ತನಿಖೆಗೆ ಮುಕ್ತ ಅವಕಾಶ ನೀಡಬೇಕು. ಗೃಹ ಮಂತ್ರಿಗಳಿಗೆ ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ಎಂದು ಹೇಳಿದ್ದೇನೆ. ಉತ್ತರಪ್ರದೇಶದಲ್ಲಿ ಹೇಗೆ ಕಠಿಣ ಕ್ರಮ ಕೈಗೊಳ್ತಾರೋ ಹಾಗೆ ಕಠಿಣ ಕ್ರಮ ತೆಗೆದುಕೊಳ್ಳಲಿ. ಕೇವಲ ಬಾಯಿಂದ ಕಠಿಣ‌ ಕ್ರಮ ಎಂದು ಹೇಳುವುದರಿಂದ ಯಾವುದೂ ಆಗಲ್ಲಾ ಎಂದು ತಮ್ಮದೇ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಸಚಿವ ಸಂಪುಟ ವಿಸ್ತರಣೆ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬೊಮ್ಮಾಯಿ ಅವರು ಅದನ್ನು ಮಾಡ್ತೀನಿ, ಇದನ್ನು ಮಾಡ್ತೀನಿ ಅಂತಾರೆ. ಆದಷ್ಟು ಬೇಗ ಒಂದು ಒಳ್ಳೆ ವ್ಯವಸ್ಥೆ ಮಾಡಬೇಕು ಎಂದರು.‌

ನಿರಾಣಿ ವಿರುದ್ಧ ಕಿಡಿಕಾರಿದ ಯತ್ನಾಳ್: ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರ ಸೂಕ್ಷ್ಮವಾಗಿದ್ದು, ಮುಧೋಳದಲ್ಲೇ ಯಾಕೆ ಆಗ್ತಿದೆ? ಎಂದು ಯತ್ನಾಳ ಪ್ರಶ್ನಿಸಿದರು. ಏಕೆಂದರೆ ಅವರು ರೈತರಿಗೆ ಸಹಕಾರ ನೀಡುತ್ತಿಲ್ಲ, ರೈತರ ಭಾವನೆಗಳಿಗೆ ಸ್ಪಂದಿಸೋದಿಲ್ಲ ಎಂದು ಪರೋಕ್ಷವಾಗಿ ಸಚಿವ ನಿರಾಣಿ ವಿರುದ್ಧ ಕಿಡಿಕಾರಿದರು. ಕಾರ್ಖಾನೆ ಮಾಲೀಕರು ರೈತರೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರೆ ಒಪ್ಪುತ್ತಾರೆ, ಅದನ್ನು ಬಿಟ್ಟು ದುರಹಂಕಾರ ಮಾಡಿದರೆ, ನಾನು ಏನು ಬೇಕಾದ್ರೂ ಮಾಡಬಹುದು ಎಂದು ಮಾಡಿದರೆ ರೈತರು ರೊಚ್ಚಿಗೇಳ್ತಾರೆ ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟ: ಪಂಚಮಸಾಲಿ‌ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿದ ಯತ್ನಾಳ, ಮೊನ್ನೆ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ಮೊದಲ‌ ಹೆಜ್ಜೆಯಾಗಿದೆ. ಎರಡನೇ ಹೆಜ್ಜೆಯಾಗಿ ಹಿಂದುಳಿದ ವರ್ಗಕ್ಕೆ ಅನೇಕ ಸಮುದಾಯ ಸೇರಿಸಬೇಕಿದೆ. ಎಸ್ ಟಿ ತಳವಾರ ಬಗ್ಗೆ ವಿಧಾನಸಭೆಯಲ್ಲಿ ನಾವು ಹೋರಾಟ ಮಾಡಿದ್ದೆವು.

ಇವತ್ತು ಅವರಿಗೆ ಸರ್ಟಿಫಿಕೇಟ್ ಕೊಡ್ತಿದ್ದಾರೆ, ಮುಂದೆ ಹಾಲುಮತ ಸಮಾಜ ಎಸ್ ಟಿಗೆ ಹೋಗುವುದು ನಿರ್ಣಯ ಆಗಬೇಕಿದೆ ಎಂದರು. ನೋಡಿ ಸಿದ್ದರಾಮಯ್ಯ ಅವರು ಯಾವ ರೀತಿ ಮೇಲ್ಜಾತಿಯ ವರನ್ನು ದ್ವೇಷ ಮಾಡ್ತಾರೆ, ಒಬಿಸಿಗೆ ಶೇ.10ರಷ್ಟು ಮೀಸಲಾತಿ ಕೊಟ್ರೆ ಇವರಿಗೆ ಏನು ಬ್ಯಾನಿ(ನೋವು) ಆಗುತ್ತೆ ಎಂದರು.

ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲಿ ಯತ್ನಾಳ್​ ವಾಗ್ದಾಳಿ: ಆದರೂ ಸಿದ್ದರಾಮಯ್ಯ ಈ ಸಮಾಜಕ್ಕೆ ಕೊಟ್ಟಿದ್ದರ ಬಗ್ಗೆ ವಿರೋಧ ಮಾಡ್ತಾನೆ. ಇವರ ಬಣ್ಣ ಬಯಲಾಗಿದೆ, ನೀವು ಬರೀ ಮುಸ್ಲಿಮರಿಗೆ ಎಲ್ಲ ಕೊಡಿ ಎಂದು ಹೇಳ್ತೀರಿ. ಮುಸ್ಲಿಮರಿಗೆ ಮೀಸಲಾತಿ ಕೊಡಬೇಕು. ಮುಸ್ಲಿಮರು 2ಎನಲ್ಲೂ ಇದ್ದಾರೆ, ಅಲ್ಪಸಂಖ್ಯಾತರಲ್ಲೂ ಇದಾರೆ.

ಈ ದೇಶದ ಅನ್ನ ತಿಂತಾರೆ, ಈ ದೇಶದ ಸಬ್ಸಿಡಿ ತಗೋತಾರೆ, ಈ ದೇಶದ ಗ್ಯಾಸ್ ತಗೋತಾರೆ‌. ಆದರೂ ಮೋದಿ ಅವರಿಗೆ ಬಾಯಿಗೆ ಬಂದಂಗೆ ಬೈತಾರೆ. ಆದರೆ ಸಿದ್ದರಾಮಯ್ಯ...? ಮೇಲ್ಜಾತಿಯವರು ಕಾಂಗ್ರೆಸ್​​​ಗೆ ಓಟ್ ಹಾಕಲ್ವಾ? ಎಂದು ಪ್ರಶ್ನಿಸಿದರು. ನಿನ್ನೆ ಸಿದ್ದರಾಮಯ್ಯ ಕೊಟ್ಟ ಹೇಳಿಕೆಯನ್ನು ತೀವ್ರವಾಗಿ ನಾನು ಖಂಡಿಸುತ್ತೇನೆ. ಅವರು ತಕ್ಷಣ ಈ ರಾಜ್ಯದ ಒಬಿಸಿ ಸೇರ್ಪಡೆಯಾಗುವ ಎಲ್ಲ ಸಮುದಾಯಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಮತಪಟ್ಟಿ ಪರಿಷ್ಕರಣೆ ಅಕ್ರಮದಲ್ಲಿ ಬಿಜೆಪಿ ಪಾತ್ರ ಇಲ್ಲ: ಪಿ. ರಾಜೀವ್

Last Updated : Nov 21, 2022, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.