ವಿಜಯಪುರ: ಭೀಮಾತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಬಳಿಯ ಎನ್ಎಚ್ 13ರಲ್ಲಿ ನಡೆದಿದೆ.
ಮಹೀಂದ್ರಾ ಎಕ್ಸ್ಯೂ 500 ಹಾಗೂ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿದ್ದು, ಎಕ್ಸ್ಯೂ ವಾಹನದಲ್ಲಿದ್ದ ಬಾಗಪ್ಪ ಪತ್ನಿ ಶೋಭಾ ಭಜಂತ್ರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಎರಡೂ ವಾಹನದ ಚಾಲಕರಿಗೆ ಗಾಯಗಳಾಗಿದ್ದು, ಹೊರ್ತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಶೋಭಾ ಬಾಗಪ್ಪನ ಎರಡನೇ ಹೆಂಡತಿ ಅಗಿದ್ದು, ಚಿಕ್ಕೋಡಿಯ ಪ್ರಧಾನ ನ್ಯಾಯಾಲಯದಲ್ಲಿ ಎಪಿಪಿ ಆಗಿದ್ದಳು. ಮೃತ ಶೋಭಾ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.