ETV Bharat / state

ಇನ್ನೂ 10ವರ್ಷ ಸಕ್ರಿಯ ರಾಜಕಾರಣದಲ್ಲಿರುತ್ತೇನೆ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ - ವಿಜಯಪುರ

ವಿಜಯೇಂದ್ರ ಭವಿಷ್ಯ ನಾಯಕನಾಗುವ ಎಲ್ಲ ಲಕ್ಷಣ ಹೊಂದಿದ್ದಾನೆ. ಸದ್ಯ ಪಕ್ಷ ಸಂಘಟನೆ ಮಾಡುಲು ಸೂಚಿಸಲಾಗಿದೆ. ಒಂದು ಕುಟುಂಬಕ್ಕೆ ಒಂದು ಹುದ್ದೆ ಇರುವ ಕಾರಣ ಸದ್ಯ ಚುನಾವಣೆಗೆ ನಿಲ್ಲುತ್ತಿಲ್ಲ ಎಂದು ವಿಜಯೇಂದ್ರ ಅವರ ರಾಜಕೀಯದ ಜೀವನದ ಬಗ್ಗೆ ಹೇಳಿದರು.

B S Yediyurappa talk about 2023 election and B Y Vijayendra political life
ಬಿ.ಎಸ್. ಯಡಿಯೂರಪ್ಪ
author img

By

Published : Jun 8, 2022, 10:37 AM IST

Updated : Jun 8, 2022, 1:21 PM IST

ವಿಜಯಪುರ: ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ 140 - 150 ಸೀಟು ಗೆಲ್ಲುವ ವಿಶ್ವಾಸವಿದೆ. ನನ್ನ ಆರೋಗ್ಯ ಚೆನ್ನಾಗಿದೆ, ವಯಸ್ಸು ಇರುವವರಿಗೆ ಪಕ್ಷಕ್ಕೆ ದುಡಿಯುವೆ, ಇನ್ನೂ ಕನಿಷ್ಠ 10ವರ್ಷದವರೆಗೆ ಪಕ್ಷಕ್ಕೆ ದುಡಿಯುತ್ತೇನೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಜಯಪುರದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೇಂದ್ರ ಭವಿಷ್ಯದ ನಾಯಕ: ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶದಂತೆ ಒಂದು ಕುಟುಂಬಕ್ಕೆ ಒಂದು ಹುದ್ದೆ ಇರುವ ಕಾರಣ ಸದ್ಯ ಚುನಾವಣೆಗೆ ನಿಲ್ಲುತ್ತಿಲ್ಲ. ಸದ್ಯ ಪಕ್ಷ ಸಂಘಟನೆ ಮಾಡುಲು ಸೂಚಿಸಲಾಗಿದೆ. ವಿಜಯೇಂದ್ರ ಮುಂದಿನ ಸಿಎಂ ಎನ್ನುವ ಪಕ್ಷದ ಕಾರ್ಯಕರ್ತರ ಅನಿಸಿಕೆಯಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ, ವಿಜಯೇಂದ್ರ ಭವಿಷ್ಯ ನಾಯಕನಾಗುವ ಎಲ್ಲ ಲಕ್ಷಣ ಹೊಂದಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯೇಂದ್ರ ಭವಿಷ್ಯ ನಾಯಕನಾಗುವ ಎಲ್ಲ ಲಕ್ಷಣ ಹೊಂದಿದ್ದಾನೆ

ಸಿದ್ದು ವಿರುದ್ಧ ಗರಂ: ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಂದು ಸ್ಥಾನ ವಿಚಾರವಾಗಿ ಬಿಜೆಪಿ ಆತ್ಮಸಾಕ್ಷಿ ಅಸ್ತ್ರ ಪ್ರಯೋಗಿಸುತ್ತಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ, ಇಲ್ಲಿ ಆತ್ಮಸಾಕ್ಷಿ ಬರುವುದಿಲ್ಲ. ಸಿದ್ದರಾಮಯ್ಯ ರಾಜಕೀಯ ಡೊಂಬರಾಟ ಮಾಡುತ್ತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.

ವಾಯುವಿಹಾರ ಮಾಡಿದ ಬಿಎಸ್​​ವೈ: ವಿಜಯಪುರ ನಗರದ ಖಾಸಗಿ ಹೋಟೆಲ್​ನಲ್ಲಿ ನಿನ್ನೆ ರಾತ್ರಿ ತಂಗಿದ್ದ ಯಡಿಯೂರಪ್ಪ, ಬೆಳಗ್ಗೆ ಸಚಿವ ಮುರುಗೇಶ ನಿರಾಣಿ ಜತೆ ವಾಯು ವಿಹಾರ ನಡೆಸಿದರು. ಇದೇ ಚುನಾವಣೆ ಬಗ್ಗೆ ನಿರಾಣಿ ಜತೆ ಮಾಹಿತಿ ಪಡೆದುಕೊಂಡರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ವಾಕಿಂಗ್ ಮಾಡಿದರು.

ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ

ಪಠ್ಯದ ಮೂಲಕ ಆರ್​​ಎಸ್​​​ಎಸ್ ಸಾಂಸ್ಕೃತಿಕ ಭಯೋತ್ಪಾದನೆ ಮಾಡುತ್ತಿದೆ ಎಂಬ ಮಾಜಿ‌ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ಪ್ರಚಾರಕ್ಕಾಗಿ ಎಲ್ಲ ವಿಷಯದಲ್ಲೂ ಬಹಳ ಹಗುರವಾಗಿ ಮಾತನಾಡುವುದರಿಂದ ತಾನು ದೊಡ್ಡ ನಾಯಕ ನಾಗುತ್ತೇನೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಈ ರೀತಿಯ ಹೇಳಿಕೆಗಳಿಂದ ವಿರೋಧ ಪಕ್ಷದ ನಾಯಕನಾಗಿ ಅವರಿಗಿದ್ದ ಗೌರವ‌ ಕಳೆದುಕೊಳ್ಳುತ್ತಿದ್ದಾರೆ. ಸಂಯಮ, ಜವಾಬ್ದಾರಿಯಿಂದ ಮಾತನಾಡಬೇಕೆಂದು ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಇಂದು ಬಿಜೆಪಿ ಶಾಸಕಾಂಗ ಸಭೆ, ಏನೆಲ್ಲಾ ಚರ್ಚೆ?

Last Updated : Jun 8, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.