ETV Bharat / state

ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಟೀಕೆ - ಟಿಪ್ಪಣಿ ಮಾಡಲ್ಲ: ಬಿಎಸ್​ವೈ

ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ. ಏರ್​ಪೋರ್ಟ್​ನಲ್ಲಿ ನಾನು ಒಂದು ಕಡೆ ಹೊರಟಿದ್ದೆ. ಅವರೊಂದು ಕಡೆ ಹೊರಟಿದ್ದರು. ಒಟ್ಟಿಗೆ ಕುಳಿತ್ತಿದ್ದೇವೆ ಅಷ್ಟೇ. ವಿಶೇಷತೆ ಏನಿಲ್ಲ ಎಂದು ಮಾಜಿ ಸಿಎಂ ಬಿಎಸ್​ವೈ ತಿಳಿಸಿದ್ದಾರೆ.

ಮಾಜಿ ಸಿಎಂ ಬಿಎಸ್​ವೈ
ಮಾಜಿ ಸಿಎಂ ಬಿಎಸ್​ವೈ
author img

By

Published : Jun 7, 2022, 9:51 PM IST

ವಿಜಯಪುರ : ಬೆಂಗಳೂರಿನ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸೋ ಆಕ್ಷೇಪದ ವಿಚಾರವಾಗಿ ನಾನು ಮಾತನಾಡೋಕೆ ಇಷ್ಟಪಡಲ್ಲ. ಯಾರು ಮಾಡಬೇಕು ಅವರಿಗೆ ಸಂಬಂಧ ಪಟ್ಟಿದ್ದು. ನಾನು ಆ ಬಗ್ಗೆ ಟೀಕೆ-ಟಿಪ್ಪಣಿ ಮಾಡಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಬಿಎಸ್​ವೈ ಅವರು ಮಾತನಾಡಿದರು

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಯವ್ಯ ಶಿಕ್ಷಕರ ಮತ‌ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಪ್ರಚಾರಕ್ಕೆ ಬಂದಿದ್ದೇನೆ. ಎರಡೂ ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಇಂದು ಇಲ್ಲಿ ಪ್ರಚಾರ ಮಾಡಿ ಮತ್ತೆರಡು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವೆ ಎಂದರು.

ರಾಜಕೀಯ ಚರ್ಚೆ ಇಲ್ಲ .. ಸಿದ್ದರಾಮಯ್ಯ ಹಾಗೂ ತಮ್ಮ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿದ ಬಿಎಸ್​ವೈ, ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ. ಏರ್​ಪೋರ್ಟ್​ನಲ್ಲಿ ನಾನು ಒಂದು ಕಡೆ ಹೊರಟಿದ್ದೆ. ಅವರೊಂದು ಕಡೆ ಹೊರಟಿದ್ದರು. ಒಟ್ಟಿಗೆ ಕುಳಿತ್ತಿದ್ದೇವೆ ಅಷ್ಟೇ. ವಿಶೇಷತೆ ಏನಿಲ್ಲ. ಬೇರೆ ಯಾವುದೇ ಮಾತುಕತೆ ಆಗಿಲ್ಲ. ರಾಜಕೀಯ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅವರ ಜೊತೆ ಏನು ಮಾತಾಡೋದು‌. ನಮ್ಮ ವಿರೋಧಿಗಳ ಜೊತೆ ನಾವೇನು ಚರ್ಚೆ ಮಾಡೋದಿದೆ ಎಂದರು. ಕ್ಯಾಬಿನೆಟ್ ಎಕ್ಸ್​ಟೆನ್ಸ್​ನ್​ ಆಗುತ್ತಾ? ಎಂಬ ಪ್ರಶ್ನೆಗೆ ನಮಗೇನೂ ಗೊತ್ತಿಲ್ಲಪ್ಪಾ ಎಂದರು.

ಓದಿ: ಚಡ್ಡಿ ಹಾಕಿ ದೇಶ ಕಾಪಾಡುತ್ತೇವೆ ಎಂದು ಯೋಧರಿಗೆ ಅವಮಾನ ಮಾಡಿದ RSS : ಬಿ. ಕೆ ಹರಿಪ್ರಸಾದ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.