ಮುದ್ದೇಬಿಹಾಳ (ವಿಜಯಪುರ): ಕೊರೊನಾ ಲಾಕ್ಡೌನ್ನಿಂದಾಗಿ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ತುತ್ತು ಅನ್ನಕ್ಕಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತವರಿಗೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ಆಹಾರದ ಪೊಟ್ಟಣ ವಿತರಿಸಲಾಗುತ್ತಿದೆ.
ತಾಳಿಕೋಟಿ ಎಬಿವಿಪಿ ಕಾರ್ಯಕರ್ತರು ಕಳೆದ 12 ದಿನಗಳಿಂದ ತಾವೇ ಆಹಾರ ತಯಾರಿಸಿ ನಿರ್ಗತಿಕರು, ಬಡವರು, ಭಿಕ್ಷುಕರು ಹಾಗು ಕಾರ್ಮಿಕರಿಗೆ ಹಂಚುತ್ತಿದ್ದಾರೆ. ಈ ಮಾನವೀಯ ಕಾರ್ಯಕ್ಕೆ ಎಬಿವಿಪಿಯ ಕಾರ್ಯಕರ್ತರ ಜೊತೆ ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಸಾಥ್ ನೀಡಿದ್ದಾರೆ.
ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೀಶೈಲ್ ಹೂಗಾರ್ ಹಾಗು ಮುಖಂಡ ವಿಠ್ಠಲ್ ಸಿಂಗ್ ಮಾತನಾಡಿ, ಸೇವೆಗಾಗಿ ಬಾಳು ಎಂಬಂತೆ ಲಾಕ್ ಡೌನ್ ಸಮಯದಲ್ಲಿ ವಿದ್ಯಾರ್ಥಿ ಮಿತ್ರರೆಲ್ಲ ಒಂದುಗೂಡಿ ದಿನವೂ ಹಸಿದವರಿಗೆ ನಮ್ಮ ಕೈಲಾದಷ್ಟು ಮಟ್ಟಿಗೆ ಉಪಹಾರ ತಯಾರಿಸಿ ಕೊಡುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಖಾಕಿ ಕೆಲಸಕ್ಕೊಂದು ಸೆಲ್ಯೂಟ್... ವೃದ್ಧೆಯ ಪ್ರಾಣ ಉಳಿಸಿದ ಪೊಲೀಸ್!