ETV Bharat / state

ಲೈವ್​ ವಿಡಿಯೋ ಮಾಡಿಟ್ಟು ವಿವಾಹಿತ ಮಹಿಳೆ ಆತ್ಮಹತ್ಯೆ

ಲೈವ್​ ವಿಡಿಯೋ ಮಾಡಿಟ್ಟು ತನ್ನ ಸಾವಿಗೆ ಕಾರಣ ಹೇಳಿ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿವಾಹಿತ ಮಹಿಳೆ ಆತ್ಮಹತ್ಯೆ
ವಿವಾಹಿತ ಮಹಿಳೆ ಆತ್ಮಹತ್ಯೆ
author img

By

Published : Apr 26, 2023, 11:27 AM IST

Updated : Apr 26, 2023, 12:13 PM IST

ವಿಜಯಪುರ: ವಿವಾಹಿತೆ ಮಹಿಳೆಯೊಬ್ಬರು ಲೈವ್​ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸುಹಾನ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ. ಏಪ್ರಿಲ್ 15ರಂದು ಲೈವ್​ ವಿಡಿಯೋ ಮಾಡಿ ಸುಹಾನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

​ಆತ್ಮಹತ್ಯೆಗೂ ಮುನ್ನ ಮಾಡಿದ್ದ ಲೈವ್​ ವಿಡಿಯೋದಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. "ಪ್ರಿಯಕರ ಅಲ್ತಾಫ್ ಸಿಲೆಮಾನ್ ​ಬ್ಲ್ಯಾಕ್ಮೇಲ್​ ಮಾಡುತ್ತಿದ್ದು, ತನ್ನೊಂದಿಗಿರುವ ನನ್ನ (ಸುಹಾನ) ಫೋಟೋವನ್ನು ಗಂಡನಿಗೆ ತೋರಿಸುತ್ತೇನೆ ಎಂದು ಬೆದರಿಕೆವೊಡ್ಡುತ್ತಿದ್ದ ಎಂದು ತಿಳಿಸಿದ್ದರು. ವಿಡಿಯೋದಲ್ಲಿ ಅಲ್ತಾಫ್​ನೊಂದಿಗೆ ಇನ್ನೂಸ್ ಹಾಗೂ ದಸ್ತಗಿರಸಾಬ್​ ಮುಳವಾಡ ಎಂಬುವವರ ಹೆಸರನ್ನು ಸುಹಾನ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಘಟನೆ? ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸಿಲೆಮಾನ್​ಗೆ 1 ವರ್ಷದ ಹಿಂದೆ ಸುಹಾನರ​ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೀತಿಯು ಚಿಗುರೊಡೆದಿತ್ತು ಎನ್ನಲಾಗಿದೆ. ಈ ವಿಷಯ ಸುಹಾನ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್​ಗೆ ತಾಕೀತು ಸಹ ಮಾಡಿದ್ದರು. ಬಳಿಕ ಸುಹಾನ ಅವರನ್ನು ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಎಂಬುವವರ ಜೊತೆಗೆ ಇತ್ತೀಚೆಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ಮಾಜಿ ಪ್ರಿಯಕರ ಅಲ್ತಾಫ್ ಸುಹಾನರಿಗೆ ನಿನ್ನ ಗಂಡನನ್ನು ಬಿಟ್ಟು ಬಾ. ಇಲ್ಲದಿದ್ದರೆ ನನ್ನೊಂದಿಗಿರುವ ಫೋಟೋವನ್ನು ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ.

ಇದನ್ನೂ ಓದಿ: ಸೈನಿ ಸಮಾಜ ಮೀಸಲಾತಿ ಹೋರಾಟ: ಪ್ರತಿಭಟನಾನಿರತ ಯುವಕ ಆತ್ಮಹತ್ಯೆ

ಅಲ್ಲದೇ ಅಲ್ತಾಫ್​ ಸ್ನೇಹಿತರಾದ ಇನ್ನೂಸ್ ಹಾಗೂ ದಸ್ತಗಿರಸಾಬ್​ ಮುಳವಾಡ ಎಂಬುವವರಿಗೆ ಮೃತ ಸುಹಾನರ ತಂದೆ ಅಸ್ಲಂ ಮುಲ್ಲಾರ ಮೇಲೆ ವೈಮನಸ್ಸಿತ್ತು ಎನ್ನಲಾಗಿದೆ. ಅಲ್ತಾಫ್​ ಸ್ನೇಹಿತರಾದ ದಸ್ತಗಿರಸಾಬ್​ ಮುಳವಾಡರ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದದ್ದರು ಇದಕ್ಕೆ ಸುಹಾನಳ ತಂದೆ ಅಸ್ಲಂ ಮುಲ್ಲಾ ಕಾರಣ ಎಂದು ದಸ್ತಗಿರಿ ಸಿಟ್ಟು ಮಾಡಿಕೊಂಡಿದ್ದರಂತೆ. ಈ ಹಿನ್ನೆಲೆ ಇನ್ನೂಸ್​, ದಸ್ತಗಿರಿಸಾಬ್​ ಹಾಗೂ ಅಲ್ತಾಫ್​​ ಸಿಲೆಮಾನ್​ ಮೂವರ ಸೇರಿ ಸುಹಾನಗೆ ಕಿರುಕುಳ ಕೊಡುತ್ತಿದ್ದರು ಎಂದು ಮೃತ ಸುಹಾನ​ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪಿಯುಸಿಯಲ್ಲಿ ಫೇಲ್‌: ವಿದ್ಯಾರ್ಥಿನಿ ಆತ್ಮಹತ್ಯೆ

ಚಾಮರಾಜನಗರದಲ್ಲಿ ನಡೆದ ಮತ್ತೊಂದು ಪ್ರಕಣದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ಕಾರಣ ಮನನೊಂದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.23 ರಂದು ನಡೆದಿತ್ತು. ಗುಂಡ್ಲುಪೇಟೆ ಮೂಲದ ವಿಜಯಲಕ್ಷ್ಮಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಪಿಯುಸಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳು ಫೇಲಾಗಿದ್ದರಿಂದ ತೀವ್ರ ಮನನೊಂದು ಹಾಸ್ಟೆಲ್​​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ತಾಯಿ ಮೇಲೆ ನಿರಂತರ ಹಲ್ಲೆ: ಪ್ರಶ್ನಿಸಿದ ಮಗನಿಗೆ ವಿಷವುಣಿಸಿ ಹತ್ಯೆಗೈದ ತಂದೆ

ಇದನ್ನೂ ಓದಿ: ನಟ ಸಂಪತ್​ ಆತ್ಮಹತ್ಯೆ ಪ್ರಕರಣ.. ಘಟನೆ ಹಿಂದಿನ ಸತ್ಯ ಬಿಚ್ಚಿಟ್ಟ ಸ್ನೇಹಿತ ರಾಜೇಶ್ ಧ್ರುವ

Last Updated : Apr 26, 2023, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.