ETV Bharat / state

ಮೈದುಂಬಿ ಹರಿಯುತ್ತಿರುವ ಕೃಷ್ಣೆ... ಆಲಮಟ್ಟಿ ಡ್ಯಾಂ ಭರ್ತಿಗೆ ಕ್ಷಣಗಣನೆ! - ದಕ್ಷಿಣ ಕರ್ನಾಟಕದ ಜಲಾಶಯ

ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೃಷ್ಣೆಗೆ ನಾಡಿನ ಮುಖ್ಯಮಂತ್ರಿ ಯಾವಾಗ ಬಾಗಿನ ಅರ್ಪಿಸುತ್ತಾರೆ ಎಂದು ಈ ಭಾಗದ ಜನರು ಕಾಯುತ್ತಿದ್ದಾರೆ.

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ
author img

By

Published : Aug 5, 2019, 7:58 AM IST

ವಿಜಯಪುರ: ಆಲಮಟ್ಟಿ ಜಲಾಶಯ ಭರ್ತಿಗೆ 1 ಮೀಟರ್ ಮಾತ್ರ ಬಾಕಿಯಿದ್ದು, ಉತ್ತರ ಕರ್ನಾಟಕದ ಅನ್ನದಾತರ ಜೀವನಾಡಿ ಕೃಷ್ಣೆಗೆ ನಾಡಿನ ಮುಖ್ಯಮಂತ್ರಿ ಯಾವಾಗ ಬಾಗಿನ ಅರ್ಪಿಸುತ್ತಾರೆ ಎಂದು ಈ ಭಾಗದ ಜನ ಎದುರು ನೋಡುತ್ತಿದ್ದಾರೆ.

ಜಲಾಶಯವನ್ನೇ ತನ್ನ ಒಡಲಲ್ಲಿಟ್ಟುಕೊಂಡಿರುವ ಬರದ ಜಿಲ್ಲೆ ವಿಜಯಪುರದಲ್ಲಿ ಈಗಲೂ ನಿರೀಕ್ಷೆಯಷ್ಟು ಮಳೆ ಆಗುತ್ತಿಲ್ಲ. ಜನರು ವರುಣನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಿದೆ. ಏತನ್ಮಧ್ಯೆ ದಕ್ಷಿಣ ಕರ್ನಾಟಕದ ಜಲಾಶಯಗಳಿಗೆ ಬಾಗಿನ ಅರ್ಪಿಸುವಾಗ ಸಿಗುವಷ್ಟು ಆದ್ಯತೆ ಉತ್ತರ ಕರ್ನಾಟಕದ ಕೃಷ್ಣೆಗೆ ಬಾಗಿನ ಅರ್ಪಿಸಲು ರಾಜ್ಯದ ಮುಖ್ಯಮಂತ್ರಿಗಳು ಮುಂದಾಗುತ್ತಿಲ್ಲ ಎಂಬ ಕೂಗು ರೈತ ಮುಖಂಡರಲ್ಲಿದೆ.

ಪ್ರತಿ ವರ್ಷ ಉಳಿದೆಲ್ಲ ಜಲಾಶಯಗಳಿಗಿಂತ ಮುಂಚೆಯೇ ಆಲಮಟ್ಟಿ ಜಲಾಶಯ ಭರ್ತಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ ಸಮಯ ನಿಗದಿ ತಡವಾಗಿಯೇ ಆಗುತ್ತಿರುವುದು ಇಲ್ಲಿನ ಜನರಲ್ಲಿ ಬೇಸರ ತರಿಸಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದೆ. ಈಗಾಗಲೇ 518.15 ಮೀಟರ್ ನೀರು ಸಂಗ್ರಹವಾಗಿದೆ. ಅಲ್ಲದೇ ಹೆಚ್ಚುವರಿ ನೀರನ್ನು 26 ಗೇಟ್​​​ಗಳ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಇದೇ ರೀತಿ ಒಳಹರಿವು ಹೆಚ್ಚಾದರೆ ಇನ್ನೆರೆಡು ದಿನದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಆಶಯವಿದೆ. ಹೀಗಾಗಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಲು ನಾಡಿನ ಮುಖ್ಯಮಂತ್ರಿ ಆಗಮಿಸುವರೇ ಎಂಬ ಕಾತುರದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಜನರಿದ್ದಾರೆ.

ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ

ಹಲವು ಬಾರಿ ರದ್ದು:

2002ರಿಂದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಆರಂಭವಾಗಿದ್ದು, 2015, 2016 ಮತ್ತು 2018ರಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲೇ ಇಲ್ಲ. 2015ರಲ್ಲಿ ಮಾತ್ರ ಡ್ಯಾಂ ತುಂಬದ ಕಾರಣಕ್ಕೆ ಬಾಗಿನ ನಡೆದಿರಲಿಲ್ಲ. 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಗನ ಸಾವಿನ ಹಿನ್ನೆಲೆಯಲ್ಲಿ ಬಂದಿರಲಿಲ್ಲ. ಇನ್ನು 2018ರಲ್ಲಿ ಬಾಗಿನ ಕಾರ್ಯಕ್ರಮ ನಿಗದಿಯಾಗಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿವರೆಗೆ ಬಂದರೂ ಹವಾಮಾನ ವೈಪರಿತ್ಯದಿಂದ ಕಾರ್ಯಕ್ರಮ ರದ್ದಾಗಿತ್ತು.

ಬಾಗಿನ ಅರ್ಪಿಸಿದ ಸಿಎಂಗಳು:

2002ರಿಂದ 2004ರವರೆಗೆ ಮೂರು ಬಾರಿ ಎಸ್.ಎಂ.ಕೃಷ್ಣ, 2005ರಲ್ಲಿ ದಿ. ಧರಂಸಿಂಗ್, 2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿ, 2007ರಲ್ಲಿ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ, 2008ರಿಂದ 10ರವರೆಗೆ ಯಡಿಯೂರಪ್ಪ, 2011ರಲ್ಲಿ ಸದಾನಂದಗೌಡ, 2012ರಲ್ಲಿ ಜಗದೀಶ ಶೆಟ್ಟರ್, 2013, 2014 ಹಾಗೂ 2017ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ.

ಇಂದು ಸಿಎಂ ಭೇಟಿ:

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ಪ್ರವಾಹಪೀಡಿತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಈ ವೇಳೆ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹ ನಿಗದಿಯಾಗುವ ಸಾಧ್ಯತೆಗಳು ಸಹ ಇವೆ.

Intro:ವಿಜಯಪುರ Body:ವಿಜಯಪುರ:
ಆಲಮಟ್ಟಿ ಜಲಾಶಯ ಭರ್ತಿಗೆ 1 ಮೀಟರ್ ಮಾತ್ರ ಬಾಕಿಯಿದ್ದು, ಉತ್ತರ ಕರ್ನಾಟಕದ ಅನ್ನದಾತರ ಜೀವನಾಡಿ ಕೃಷ್ಣೆಗೆ ನಾಡಿನ ಮುಖ್ಯಮಂತ್ರಿ ಯಾವಾಗ ಬಾಗಿನ ಅರ್ಪಿಸುತ್ತಾರೆ ಎಂದು ಈ ಭಾಗದ ಜನ ಎದುರು ನೋಡುತ್ತಿದ್ದಾರೆ.
ಜಲಾಶಯವನ್ನೇ ತನ್ನ ಒಡಲಲ್ಲಿಟ್ಟುಕೊಂಡಿರುವ ಬರ ಜಿಲ್ಲೆ ವಿಜಯಪುರದಲ್ಲಿ ಈಗಲೂ ನೀರಿಕ್ಷೆಯಷ್ಟು ಮಳೆ ಆಗುತ್ತಿಲ್ಲ. ಜನರು ವರುಣನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಿದೆ. ಏತನ್ಮಧ್ಯೆ ದಕ್ಷಿಣ ಕರ್ನಾಟಕದ ಜಲಾಶಯಗಳಿಗೆ ಬಾಗಿನ ಅರ್ಪಿಸುವಾಗ ಸಿಗುವಷ್ಟು ಆದ್ಯತೆ ಉತ್ತರ ಕರ್ನಾಟಕದ ಕೃಷ್ಣೆಗೆ ಬಾಗಿನ ಅರ್ಪಿಸಲು ರಾಜ್ಯದ ಮುಖ್ಯಮಂತ್ರಿಗಳು ಮುಂದಾಗುತ್ತಿಲ್ಲ ಎಂಬ ಕೂಗು ರೈತ ಮುಖಂಡರಲ್ಲಿದೆ.
ಪ್ರತಿ ವರ್ಷ ಉಳಿದೆಲ್ಲ ಜಲಾಶಯಗಳಿಗಿಂತ ಮುಂಚೆಯೇ ಆಲಮಟ್ಟಿ ಜಲಾಶಯ ಭರ್ತಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆ ಸಮಯ ನಿಗದಿ ತಡವಾಗಿಯೇ ಆಗುತ್ತಿರುವುದು ಇಲ್ಲಿನ ಜನರಲ್ಲಿ ಬೇಸರ ತರಿಸಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದೆ. ಈಗಾಗಲೇ 518.15 ಮೀಟರ್ ನೀರು ಸಂಗ್ರಹವಾಗಿದೆ. ಅಲ್ಲದೇ ಹೆಚ್ಚುವರಿ ನೀರನ್ನು 26 ಗೇಟ್ ಗಳ ಮೂಲಕ ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ಇದೇ ರೀತಿ ಒಳಹರಿವು ಹೆಚ್ಚಾದರೆ ಇನ್ನೆರೆಡು ದಿನದಲ್ಲಿ ಜಲಾಶಯ ಸಂಪೂರ್ಣ ಭತಿಯಾಗುವ ಆಶಯವಿದೆ. ಹೀಗಾಗಿ ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಲು ನಾಡಿನ ಮುಖ್ಯಮಂತ್ರಿ ಆಗಮಿಸುವರೇ ಎಂಬ ಕಾತರದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಜನರಿದ್ದಾರೆ.
ಹಲವು ಬಾರಿ ರದ್ದು:
2002ರಿಂದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಆರಂಭವಾಗಿದ್ದು, 2015, 2016 ಮತ್ತು 2018ರಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲೇ ಇಲ್ಲ. 2015ರಲ್ಲಿ ಮಾತ್ರ ಡ್ಯಾಂ ತುಂಬದ ಕಾರಣಕ್ಕೆ ಬಾಗಿನ ನಡೆದಿರಲಿಲ್ಲ. 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮಗನ ಸಾವಿನ ಹಿನ್ನೆಲೆಯಲ್ಲಿ ಬಂದಿರಲಿಲ್ಲ. ಇನ್ನೂ 2018ರಲ್ಲಿ ಬಾಗಿನ ಕಾರ್ಯಕ್ರಮ ನಿಗದಿಯಾಗಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿವರೆಗೆ ಬಂದರೂ ಹವಾಮಾನ ವೈಪರಿತ್ಯದಿಂದ ಕಾರ್ಯಕ್ರಮ ರದ್ದಾಗಿತ್ತು.
ಬಾಗಿನ ಅರ್ಪಿಸಿದ ಸಿಎಂಗಳು:
2002ರಿಂದ 2004ರ ವರೆಗೆ ಮೂರು ಬಾರಿ ಎಸ್.ಎಂ.ಕೃಷ್ಣ, 2005ರಲ್ಲಿ ದಿ.ಧರ್ಮಸಿಂಗ್, 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ, 2007ರಲ್ಲಿ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ, 2008ರಿಂದ 10ರ ವರೆಗೆ ಯಡಿಯೂರಪ್ಪ, 2011ರಲ್ಲಿ ಸದಾನಂದಗೌಡ, 2012ರಲ್ಲಿ ಜಗದೀಶ ಶೆಟ್ಟರ್, 2013, 2014 ಹಾಗೂ 2017ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ.
ಇಂದು ಸಿಎಂ ಭೇಟಿ: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಈ ವೇಳೆ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹ ನಿಗದಿಯಾಗುವ ಸಾಧ್ಯತೆಗಳು ಸಹ ಇವೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.