ETV Bharat / state

ಸಮುದ್ರಕ್ಕೆ ಈಜಲು ತೆರಳಿದ್ದ ಯುವಕ ಸಾವು - drowned in water and died

ಸ್ನೇಹಿತರೊಂದಿಗೆ ಸಮುದ್ರಕ್ಕೆ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಒಂದು ಘಂಟೆಯ ನಂತರ ಆತ ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ದೊರಕಿದೆ.

ಶಪೀಸಲ್ ಹಿಬ್ಬುರೆಹಮಾನ ಡಾಂಗೀ ಮೃತ ಯುವಕ
ಶಪೀಸಲ್ ಹಿಬ್ಬುರೆಹಮಾನ ಡಾಂಗೀ ಮೃತ ಯುವಕ
author img

By

Published : Dec 11, 2020, 7:42 PM IST

ಭಟ್ಕಳ: ತಾಲೂಕಿನ ತೆಂಗಿನಗುಂಡಿಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿ ಯುವಕ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ಮೃತ ಯುವಕ ತೆಂಗಿನಗುಂಡಿ ಹೆಬಳೆ ನಿವಾಸಿ ಶಪೀಸಲ್ ಹಿಬ್ಬುರೆಹಮಾನ ಡಾಂಗೀ (24) ಎಂದು ತಿಳಿದುಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಸಮುದ್ರಕ್ಕೆ ಈಜಲು ತೆರಳಿದಾಗ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನೀರಿನಲ್ಲಿ ಮುಳುಗಿದ ಒಂದು ತಾಸಿನ ಬಳಿಕ ದೇಹ ಸಮುದ್ರದಲ್ಲಿ ಪತ್ತೆಯಾಗಿದೆ. ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ.

ಓದಿ: 13 ವರ್ಷದ ಬಾಲಕಿಗೆ ಮದುವೆ: ತಂದೆ ಸೇರಿ 9 ಮಂದಿ ಬಂಧನ

ಯುವಕ ಇತ್ತೀಚೆಗೆ ಬಿ.ಕಾಂ ಪದವಿ ಪೂರೈಸಿದ್ದ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.