ಶಿರಸಿ : ಕುಡಿದ ಮತ್ತಿನಲ್ಲಿ ತಹಶೀಲ್ದಾರರ ವಾಹನವನ್ನು ಮನಬಂದಂತೆ ಚಲಾಯಿಸಿದ ಚಾಲಕನನ್ನು ತಡೆದು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಯಲ್ಲಾಪುರದ ನಗರದಲ್ಲಿ ಕಳೆದ ರಾತ್ರಿ ನಡೆದಿದೆ.
ತಹಶೀಲ್ದಾರ್ ವಿಶ್ವನಾಥ್ ಅವರ ವಾಹನ ಚಾಲಕ ಕುಮಾರ್ ಎಂಬುವವರು ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ವಾಹನ ರಿವರ್ಸ್ ತೆಗೆದುಕೊಳ್ಳುವ ಭರದಲ್ಲಿ ಸಾರ್ವಜನಿಕರು ಅಪಘಾತಕ್ಕೀಡಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ಧಿಮಾಕಿನಿಂದಲೇ ಚಾಲಕ ಕುಮಾರ್ ಉತ್ತರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನೂ ಸ್ಥಳದಲ್ಲಿ ವಾಹನ ಮತ್ತು ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಾಲಕ ತಲೆಗೆ ಏರಿದ ನಶೆ ಇಳಿದಿದೆ. ನಂತರ ಸಾರ್ವಜನಿಕರಲ್ಲಿ ಕ್ಷಮೆ ಕೇಳಿರುವ ಸ್ಥಳದಿಂದ ತೆರಳಿದ್ದಾನೆ. ಘಟನೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಚಾಲಕ ಕುಮಾರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.