ಕಾರವಾರ (ಉ.ಕ): ಕಳೆದೆರಡು ವರ್ಷಗಳ ಹಿಂದೆ ಉಂಟಾದ ಪ್ರವಾಹದಿಂದಾಗಿ ಗ್ರಾಮಕ್ಕಿದ್ದ ಸಂಪರ್ಕ ಸೇತುವೆ ಕೊಚ್ಚಿ ಹೋಗಿತ್ತು. ಗ್ರಾಮದಿಂದ ಓಡಾಟಕ್ಕೆ ಬೇರೆ ದಾರಿಯಿಲ್ಲದೇ ಅನಿವಾರ್ಯ ಎನ್ನುವಂತೆ ಗ್ರಾಮಸ್ಥರು ತೆಪ್ಪದ ಮೂಲಕ ನದಿ ದಾಟುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ಭೇಟಿ ನೀಡಿದ್ದ ಅಧಿಕಾರಿಗಳು ನದಿ ದಾಟಲು ತೆಪ್ಪ ಬಳಸದಂತೆ ನೋಟಿಸ್ ನೀಡುವ ಬೇದರಿಕೆ ಒಡ್ಡಿದ್ದು, ಇದೀಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಊರಿನವರಿಗೆ ಸಮಸ್ಯೆಯಾಗುತ್ತದೆ ಎಂದು ಸಹಾಯಕ್ಕೆ ಮುಂದಾದ ಗ್ರಾಮಸ್ಥರು ತೆಪ್ಪದ ವ್ಯವಸ್ಥೆ ಮಾಡಿಕೊಂಡಿದ್ದರು, ಆದರೆ, ಅಧಿಕಾರಿಗಳು ಇಂತಹದ್ದೊಂದು ಗೊಂದಲಮಯ ವಾತಾವರಣ ಸೃಷ್ಟಿಸಿದ್ದಾರೆ.
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮಕ್ಕಿದ್ದ ತೂಗು ಸೇತುವೆ ಪ್ರವಾಹದಿಂದ ಕೊಚ್ಚಿ ಹೋಗಿ 12 ವರ್ಷ ಕಳೆದಿದೆ. ಆದರೆ, ಈವರೆಗೆ ಅಧಿಕಾರಿಗಳು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ. ಇದೇ ಕಾರಣಕ್ಕೆ ಗ್ರಾಮಸ್ಥರೇ ತೆಪ್ಪ ಬಳಸಿ ನದಿ ದಾಟುತ್ತಿದ್ದರು. ಆದರೆ ಶಾಲಾ ಮಕ್ಕಳು ಸಹ ಇದೇ ತೆಪ್ಪ ಬಳಸಿ ನದಿ ದಾಟಬೇಕಾಗಿದೆ ಎಂಬ ಸುದ್ದಿ ಹರಿದಾಡಿದ್ದು, ಇದು ಅಧಿಕಾರಿಗಳ ಗಮನಕ್ಕೂ ಬಂದಿದೆ.
ಈ ಹಿನ್ನೆಲೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್, ಪಿಡಿಒ ಸೇತುವೆ ನಿರ್ಮಾಣ ಕುರಿತು ನಿರ್ಧಾರ ಕೈಗೊಳ್ಳುವ ಬದಲು ಗ್ರಾಮಸ್ಥರಿಗೆ ನದಿಯಲ್ಲಿ ತೆಪ್ಪ ಬಳಸದಂತೆ ತಾಕೀತು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೇತುವೆ ಇಲ್ಲದ ಕಾರಣ 12 ಕಿ.ಮೀಟರ್ನಷ್ಟು ಸುತ್ತುವರೆದು ಅಂಕೋಲಾಗೆ ತೆರಳಬೇಕಾದ ಪರಿಸ್ಥಿತಿ ಇದೆ. ಇನ್ನು ಅಂಕೋಲಾದಿಂದ ಡೋಂಗ್ರಿ ಗ್ರಾಮ ಸುಮಾರು 40 ಕಿಲೋ ಮೀಟರ್ ದೂರದಲ್ಲಿದ್ದು ಗ್ರಾಮದಲ್ಲಿ ಗಂಗಾವಳಿ ನದಿ ಹರಿಯುವ ಹಿನ್ನೆಲೆ ನದಿ ದಾಟಿಯೇ ಊರಿಗೆ ತೆರಳಬೇಕಿದೆ. ಕಳೆದ 5 ವರ್ಷಗಳ ಹಿಂದೆ ಸುಂಕಸಾಳ ಗ್ರಾಮದ ಬಳಿ ಡೋಂಗ್ರಿಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದು, ಇದರಿಂದ ಗ್ರಾಮಕ್ಕೆ ತೆರಳಲು ಸುಮಾರು 20 ಕಿ.ಮೀ ಕಡಿಮೆಯಾಗುವಂತಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ತಪ್ಪು ಮಾಹಿತಿ ಹೋಗಿದ್ದರಿಂದ ಈ ಸಮಸ್ಯೆಯಾಗಿದೆ. ಗ್ರಾಮಸ್ಥರ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು ಈಗಾಗಲೇ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ... ಕೊಲೆಯೋ, ಆತ್ಮಹತ್ಯೆಯೋ!?