ETV Bharat / state

ಕದಂಬ ನೌಕಾನೆಲೆಗೆ ವೈಸ್‌ ಅಡ್ಮಿರಲ್ ಹರಿಕುಮಾರ್‌ ಭೇಟಿ, ಪರಿಶೀಲನೆ

ಫೆ. 21 ರಂದು ಪಶ್ಚಿಮ ನೌಕಾ ವಲಯದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಆರ್. ಹರಿಕುಮಾರ್ ಭಾನುವಾರ ಕದಂಬ ನೌಕಾನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

Vice Admiral Visits Kadamba Naval Base
ಕದಂಬ ನೌಕಾನೆಲೆಗೆ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಭೇಟಿ
author img

By

Published : Mar 15, 2021, 10:06 AM IST

ಕಾರವಾರ: ಪಶ್ಚಿಮ‌ ನೌಕಾ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಕಾರವಾರದ ಕದಂಬ‌ ನೌಕಾನೆಲೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

Vice Admiral Visits Kadamba Naval Base
ಕದಂಬ ನೌಕಾನೆಲೆಗೆ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಭೇಟಿ

ಫೆ. 21 ರಂದು ಪಶ್ಚಿಮ ನೌಕಾ ವಲಯದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಕದಂಬ ನೌಕಾನೆಲೆಗೆ ಆಗಮಿಸಿದ ಅವರನ್ನು ಕರ್ನಾಟಕ ನೌಕಾ ಪ್ರದೇಶದ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಸ್ವಾಗತಿಸಿದರು. ಇದೇ ವೇಳೆ, ನೌಕಾದಳದಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಕರ್ನಾಟಕ ನೌಕಾ ಪ್ರದೇಶದಲ್ಲಿನ ಹಡಗುಗಳು ಮತ್ತು ಘಟಕಗಳ ಕಾರ್ಯಾಚರಣೆಯ ಸಿದ್ಧತೆ ಪರಿಶೀಲಿಸಿದರು.

ಎರಡನೇ ಹಂತದ ಸೀಬರ್ಡ್ ಯೋಜನೆಯ ಮೂಲಸೌಕರ್ಯ ಅಭಿವೃದ್ಧಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಕರ್ನಾಟಕ ನೌಕಾ ಪ್ರದೇಶದ ಅಧಿಕಾರಿಗಳು, ನಾವಿಕರು, ಡಿಎಸ್‌ಸಿ ಜವಾನರು ಮತ್ತು ನಾಗರಿಕ ಸಿಬ್ಬಂದಿಗಳೊಂದಿಗೆ ಪ್ರತ್ಯೇಕವಾಗಿ ಸಂವಾದ ನಡೆಸಿದರು.

ಓದಿ: ರಾಹುಲ್ ಗಾಂಧಿ, ಶರದ್ ಪವಾರ್ ಸೇರಿ ಅನೇಕರ ತಂಡ ನಾಳೆ ಕದಂಬ ನೌಕಾನೆಲೆಗೆ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.