ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಳೆದ 3 ದಿನಗಳಿಂದ ಬಂದ್ ಆಗಿದ್ದ ಯಲ್ಲಾಪುರದ ಬೇಡ್ತಿ ಸೇತುವೆಯ ಮೇಲಿನ ಸಂಚಾರ ಪುನಾರಂಭವಾಗಿದೆ.
ಸಂಚಾರ ಬಂದ್ ಆದ ಪರಿಣಾಮ ಸಾರ್ವಜನಿಕರು ಯಲ್ಲಾಪುರದಿಂದ ಶಿರಸಿಗೆ ಓಡಾಡಲು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್, ಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆ ಬೇಡ್ತಿ ಬ್ರಿಡ್ಜ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ಸ್ವತಃ ಬಸ್ನಲ್ಲಿ ಕುಳಿತು ಬ್ರಿಡ್ಜ್ ಮೇಲೆ ಸಂಚರಿಸಿದರು.
ಕಳೆದ 3 ದಿನಗಳಿಂದ ಬಂದ್ ಆಗಿದ್ದ ಬಸ್ ಸಂಚಾರ ಪ್ರಾರಂಭವಾಗಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಬೈಕ್, ಕಾರು ಮತ್ತು ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಯಾಣಿಕರು ಬಸ್ನಲ್ಲಿ ಸಂಚರಿಸದೆ ಬ್ರಿಡ್ಜ್ ಮೇಲೆ ನಡೆದು ಸಂಚರಿಸುತ್ತಿದ್ದಾರೆ. ಬ್ರಿಟಿಷರ ಕಾಲದ ಸೇತುವೆಯಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.