ಶಿರಸಿ(ಉತ್ತರ ಕನ್ನಡ) : ಆಟವಾಡಲು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ಎಸಳೆ ಕೆರೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕಸ್ತೂರಬಾ ನಗರದ ಅಹ್ಮದ್ ರಜಾಕ್ ಜನ್ನಿಗೇರಿ (14), ಇಮಾಮ್ ಖಾಸಿಮ್ ರಿಯಾಜ್ ಪಾಳಾ (14) ಮೃತ ಬಾಲಕರು. ಇವರು ಸಮೀಪದ ಕಸ್ತೂರಬಾ ಶಾಲೆಯಲ್ಲಿ ಓದುತ್ತಿದ್ದರು. ಶಾಲೆ ಮುಗಿಸಿ ಬಂದ ನಂತರ ನಾಲ್ವರು ಬಾಲಕರು ಕೆರೆ ಬಳಿ ಆಟವಾಡಲು ತೆರಳಿದ್ದರು. ಆಗ ಇಬ್ಬರು ಕೆರೆಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ತೆರಳಿ ಬಾಲಕರ ಶವಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊಂಡಕ್ಕೆ ಬಿದ್ದು ಐವರು ವಿದ್ಯಾರ್ಥಿಗಳು ಓರ್ವ ಶಿಕ್ಷಕ ಸಾವು!