ETV Bharat / state

ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬಿದ್ದ ಮತ್ಸ್ಯರಾಶಿ - traditional fishing at Karwar

ಕಾರವಾರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಗುರುವಾರ ಭರ್ಜರಿ ಮೀನಿನ ಶಿಖಾರಿಯಾಗಿದೆ. ಕಾರವಾರ ನಗರದ ರವೀಂದ್ರನಾಥ ಕಡಲತೀರದ ಒಂದು ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಏಂಡಿ ಬಲೆ ಹಾಕಿದ್ದ ಮೀನುಗಾರರು ಭರ್ಜರಿ ಮೀನಿನ ಬೇಟೆಯಾಡಿದ್ದಾರೆ. ಕಡಲ ತೀರದುದ್ದಕ್ಕೂ ಮೀನಿನ ರಾಶಿ ರಾಶಿ ಕಂಡು ಬಂದಿದ್ದು, ಅಪರೂಪಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮೀನು ಸಿಕ್ಕಿದ್ದಕ್ಕೆ ಮೀನುಗಾರರು ಕೂಡ ಖುಷಿಯಾಗಿದ್ದಾರೆ.

traditional fisherman's trap
ಸಾಂಪ್ರದಾಯಿಕ ಮೀನುಗಾರರ ಬಲೆಗೆ ಬಿದ್ದ ಮತ್ಸ್ಯರಾಶಿ
author img

By

Published : Oct 15, 2020, 10:50 PM IST

ಕಾರವಾರ: ಒಂದೆಡೆ ವಾಯುಭಾರ ಕುಸಿತದಿಂದಾಗಿ ಬೋಟುಗಳು ಮೀನುಗಾರಿಕೆಗೆ ತೆರಳದೇ ಬಂದರುಗಳಲ್ಲಿ ಲಂಗರು ಹಾಕಿ ನಿಂತಿದ್ದರೆ, ಇತ್ತ ಸಾಂಪ್ರದಾಯಿಕ ಏಂಡಿ ಬಲೆಗೆ ಮಾತ್ರ ರಾಶಿ ರಾಶಿ ಮೀನು ಬಿದ್ದಿದ್ದು, ಮೀನುಗಾರರ ಖುಷಿಗೆ ಕಾರಣವಾಗಿದೆ.

ಹೌದು, ಕಳೆದ ಎರಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಗಾಳಿಯೂ ಹೆಚ್ಚಾಗಿ ಬೀಸುತ್ತಿರುವುದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮಾಡಿದೆ. ಹೀಗಾಗಿ ಹವಾಮಾನ ಇಲಾಖೆ ಕೂಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡ ಆಗಾಗ ಘೋಷಣೆ ಮಾಡುತ್ತಿದೆ. ಇದರ ಆಧಾರದ ಮೇಲೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದು, ಕಳೆದ ಹಲವು ದಿನಗಳಿಂದ ಮೀನುಗಾರರು ಕಡಲಿಗೆ ಇಳಿಯುತ್ತಿಲ್ಲ. ಹೀಗಾಗಿ ಮತ್ಸ್ಯ ಶಿಕಾರಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಾಗಿತ್ತು.

ಆದರೆ, ಕಾರವಾರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಗುರುವಾರ ಭರ್ಜರಿ ಮೀನಿನ ಶಿಖಾರಿಯಾಗಿದೆ. ಕಾರವಾರ ನಗರದ ರವೀಂದ್ರನಾಥ ಕಡಲ ತೀರದ ಒಂದು ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಏಂಡಿ ಬಲೆ ಹಾಕಿದ್ದ ಮೀನುಗಾರರು ಭರ್ಜರಿ ಮೀನಿನ ಬೇಟೆಯಾಡಿದ್ದಾರೆ. ಕಡಲ ತೀರದುದ್ದಕ್ಕೂ ಮೀನಿನ ರಾಶಿ ರಾಶಿ ಕಂಡು ಬಂದಿದ್ದು, ಅಪರೂಪಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮೀನು ಸಿಕ್ಕಿದ್ದಕ್ಕೆ ಮೀನುಗಾರರು ಕೂಡ ಖುಷಿಯಾಗಿದ್ದಾರೆ.

ಬಲೆ ತುಂಬ ಮೀನು ತುಂಬಿದ್ದ ಕಾರಣ ಸಮುದ್ರದಿಂದ ಬಲೆ ಎಳೆದು ತರಲು ಮೀನುಗಾರರು ಹರಸಾಹಸ ಪಟ್ಟರು. ಬಳಿಕ ಮೀನುಗಾರರು ಬಲೆಯಿಂದ ಮೀನನ್ನ ಬೇಪರ್ಡಿಸುವಲ್ಲಿ ತಲ್ಲೀನರಾಗಿದ್ದರೆ, ಸ್ಥಳೀಯರು, ಮೀನು ಮಾರಾಟ ಮಹಿಳೆಯರೂ ಸ್ಥಳಕ್ಕಾಗಮಿಸಿ ಮೀನುಗಳನ್ನು ಆಯ್ದುಕೊಂಡರು. ದುಬಾರಿ ದರದ ಮೀನುಗಳು ಅಧಿಕವಾಗಿ ಬಲೆಗೆ ಬಿದ್ದಿದ್ದು, ಕಾರವಾರದ ಜನ ನೇರವಾಗಿ ಕಡಲತೀರಕ್ಕೆ ಬಂದು ಮೀನು ಖರೀದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.