ETV Bharat / state

ಭಟ್ಕಳದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬ ಕಳ್ಳತನ! - bhatkal theft news

ಭಟ್ಕಳ ತಾಲೂಕಿನ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ತಡರಾತ್ರಿ ನುಗ್ಗಿರುವ ಕಳ್ಳರು ಕಾಣಿಕೆ ಡಬ್ಬದಲ್ಲಿನ ಹಣವನ್ನು ಕಳ್ಳತನ ಮಾಡಿದ್ದಾರೆ.

Bhatkal
ಭಟ್ಕಳದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ
author img

By

Published : Jul 27, 2020, 10:40 PM IST

ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ತಡರಾತ್ರಿ ಹಿಂಬದಿಯ ಗೋಡೆಯನ್ನು ಹತ್ತಿ ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬವನ್ನು ಎತ್ತಿಕೊಂಡು ಹೋಗಿದ್ದಾರೆ. ಅದರಲ್ಲಿದ್ದ ಅಂದಾಜು 30 ಸಾವಿರ ರೂಪಾಯಿಗೂ ಅಧಿಕ ಹಣವನ್ನು ತೆಗೆದುಕೊಂಡು ಕಾಣಿಕೆ ಡಬ್ಬವನ್ನು ವೆಂಕಟಾಪುರ ಹೊಳೆಯಲ್ಲಿ ಎಸೆದು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ.

ಭಟ್ಕಳದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಕಳ್ಳತನ

ದೇವಸ್ಥಾನದ ಒಳ ನುಗ್ಗುವಾಗ ಗೋಡೆಯನ್ನು ಹಾರಿ ಬಂದಿರುವ ಕಳ್ಳರು ಹೊರ ಹೋಗುವಾಗ ಕಾಣಿಕೆ ಹುಂಡಿ ಭಾರವಿದ್ದ ಕಾರಣ ಹಿಂದಿನ ದ್ವಾರದ ಬೀಗವನ್ನು ಮುರಿದು ಅದೇ ದ್ವಾರದ ಮೂಲಕ ಪರಾರಿಯಾಗಿರುವುದು ಕಂಡು ಬಂದಿದೆ. ರವಿವಾರದ ಬೆಳಿಗ್ಗೆ ನಿತ್ಯ ಪೂಜೆಗೆಂದು ಬರುತ್ತಿದ್ದ ಪೂಜಾರಿ ದೇವಸ್ಥಾನಕ್ಕೆ ಬಂದಾಗ ಕಾಣಿಕೆ ಹುಂಡಿಯೂ ಇಲ್ಲದೆ, ಅದನ್ನು ಇಟ್ಟಂತಹ ಕಟ್ಟಿಗೆಯ ಪೀಠವೂ ಚೆಲ್ಲಾಪಿಲ್ಲಿಯಾಗಿತ್ತು. ಇನ್ನೊಂದು ಡಬ್ಬ ಹಾಗೂ ಹಿಂದುಗಡೆಯ ದ್ವಾರವೂ ಕೂಡ ತೆರೆದಿರುವುದನ್ನು ನೋಡಿ ಕೂಡಲೇ ದೇವಸ್ಥಾನದ ಕಮಿಟಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Bhatkal
ಕಾಣಿಕೆ ಡಬ್ಬ ಕಳ್ಳತನ

ತಕ್ಷಣವೇ ಅಧ್ಯಕ್ಷರು ಕಮಿಟಿಯ ಎಲ್ಲಾ ಸದಸ್ಯರುಗಳಿಗೆ ತಿಳಿಸಿ, ಪೊಲೀಸರಿಗೆ ದೇವಸ್ಥಾನ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿ.ಪಿ.ಐ. ದಿವಾಕರ್​, ಪಿ.ಎಸ್.ಐ. ಭರತ್ ಹಾಗೂ ಗ್ರಾಮೀಣ ಠಾಣೆಯ ಎ.ಎಸ್.ಐ. ಮಂಜುನಾಥ ಗೌಡ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಕಳ್ಳತನವಾದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಕಾಣಿಕೆ ಹುಂಡಿಯನ್ನು ಹೊತ್ತೊಯ್ದು ಪರಾರಿಯಾಗಿರುವ ಕಳ್ಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವುದಾಗಿ ಸಿ.ಪಿ.ಐ ದಿವಾಕರ್​ ಭರವಸೆ ನೀಡಿದ್ದಾರೆ. ನಂತರ ಸಂಜೆ ತನಕ ದೇವಸ್ಥಾನದ ಆಡಳಿತ ಕಮಿಟಿಯ ಸದಸ್ಯರು ಕಳ್ಳತನ ಆಗಿದ್ದ ಕಾಣಿಕೆ ಹುಂಡಿ ಹುಡಿಕಿದಾಗ ವೆಂಕಟಾಪುರ ಹೊಳೆಯಲ್ಲಿ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.