ಭಟ್ಕಳ : ತಾಲೂಕಿನಲ್ಲಿ ಎಲ್ಲಿ ನೋಡಿದ್ರೂ ಕೊರೊನಾ ವೈರಸ್ ಬಗ್ಗೆ ಮಾತುಕತೆ, ಚರ್ಚೆ ಜೋರಾಗಿದೆ. ಈ ನಡುವೆ ಮುಂಜಾನೆ 5 ಗಂಟೆ ಹಾಗೂ 9 ಗಂಟೆ ಸುಮಾರಿಗೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಭಾಗದಲ್ಲಿ ಮಳೆ ಸುರಿಯುವುದು ಕಡಿಮೆ. ಆದರೆ ಮಾರ್ಚ್ ಮೊದಲ ವಾರದಲ್ಲೇ ಮಳೆಯಾಗಿರುವುದು ತಾಲೂಕಿನ ವಾತಾವರಣವನ್ನು ತಂಪಗಾಗಿಸಿದೆ.
ಕೊರೊನಾ ವೈರಸ್ ತಂಪಗಿನ ಪ್ರದೇಶದಲ್ಲಿ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಮಳೆ ಜನರಲ್ಲಿ ಆತಂಕವನ್ನೂ ಹೆಚ್ಚಿಸಿದೆ.