ಕಾರವಾರ: ಎಸ್ಎಸ್ಎಲ್ಸಿಯಲ್ಲಿ ಫೇಲ್ ಆಗುತ್ತೇನೆ ಎಂಬ ಪೂರ್ವಗ್ರಹದ ಭಯದಲ್ಲಿ ಬಾಲಕನೋರ್ವ ಬಾರದಲೋಕಕ್ಕೆ ತೆರಳಿದ್ದಾನೆ. ಚಲಿಸುತ್ತಿದ್ದ ರೈಲಿನ ಮುಂಭಾಗ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ರೈಲು ನಿಲ್ದಾಣದ ಬಳಿ ನಡೆದಿದೆ.
ಹೊನ್ನಾವರ ತಾಲೂಕು ಹಳದಿಪುರದ ಕುದಬೈಲ್ ನಿವಾಸಿ ವಿಜೇತ ರಾಮದಾಸ ನಾಯ್ಕ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನ ಮುಂಭಾಗದಲ್ಲಿ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಈತ ಕರ್ಕಿಯ ಗುರುಕುಲ ಫ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಎಸ್ಎಸ್ಎಸ್ಸಿ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ದೇವನಹಳ್ಳಿ ತಾಲೂಕಲ್ಲಿ ಫಲಿತಾಂಶ ಬರುವ ಮುನ್ನವೇ ವಿದ್ಯಾರ್ಥಿವೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ ರಿಸಲ್ಟ್ ಬಂದಾಗ ಆತನಿಗೆ 530 ಅಂಕ ಬಂದಿವೆ. ಫಲಿತಾಂಶಕ್ಕೂ ಮುನ್ನವೇ ಇಬ್ಬರು ವಿದ್ಯಾರ್ಥಿಗಳು ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಬೇಸರದ ಸಂಗತಿ.