ETV Bharat / state

ಕುಮಟಾ ಪೊಲೀಸ್ ಠಾಣೆಯಲ್ಲಿ ಜನ ಸಂಪರ್ಕ ಸಭೆ ನಡೆಸಿದ ಎಸ್​ಪಿ: ಕಾನೂನು ಪಾಲನೆಗೆ ಸಲಹೆ - Karwar

ಕುಮಟಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು.

SP held a public meeting
ಕುಮಟಾ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ನಡೆಸಿದ ಎಸ್​ಪಿ
author img

By

Published : Oct 24, 2020, 7:58 AM IST

ಕಾರವಾರ: ಕುಮಟಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಸಿ ಅರ್ಜಿದಾರರ ಅಹವಾಲುಗಳಿಗೆ ಪರಿಹಾರೋಪಾಯ ತಿಳಿಸಲಾಯಿತು.

ಕುಮಟಾ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ನಡೆಸಿದ ಎಸ್​ಪಿ: ಕಾನೂನು ಪಾಲನೆಗೆ ಸಲಹೆ

ಸಾರ್ವಜನಿಕರಿಂದ ಪ್ರಸ್ತಾಪವಾದ ವಿಷಯಗಳಿಗೆ ಉತ್ತರಿಸಿದ ಎಸ್​ಪಿ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲವೇ ಮೊಬೈಲ್​​ಗಳಿಗೆ ಕರೆ ಮಾಡಿ ಒಟಿಪಿ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗಿದ್ದು, ಜನರು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಮಾಹಿತಿ, ಎಟಿಎಂ ಪಿನ್ ಮುಂತಾದವನ್ನು ಹೇಳಬಾರದು. ಮಕ್ಕಳು ಮೊಬೈಲ್ ಬಳಸುವಾಗ ಎಚ್ಚರ ವಹಿಸಿ, ಖಾಸಗಿ ವೆಬ್ ತಾಣಗಳನ್ನು ತೆರೆಯದಂತೆ ಸೂಚನೆ ನೀಡಬೇಕು. ಅಲ್ಲದೆ ಗಣ್ಯರ ಇಲ್ಲವೇ ಇತರರ ತೇಜೋವಧೆ ಮಾಡುವಂತಹ ಪೋಸ್ಟ್​​​ಗಳನ್ನು ಹಾಕುವವರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳು ನಮ್ಮಲ್ಲಿ ಇರುವುದಿಲ್ಲ. ಆದರೆ ಕ್ರಿಮಿನಲ್ ಅತಿಕ್ರಮಣ ಆಗಿ ಕಂದಾಯ ಇಲಾಖೆಯವರು ಸೂಚನೆ ನೀಡಿದ ನಂತರವೇ ಪ್ರಕರಣ ದಾಖಲಿಸಿಕೊಳ್ಳಬಹುದು. ನ್ಯಾಯಾಲಯದ ಸೂಚನೆ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಕೇವಲ ಭೂ ದಾಖಲೆ ಇಟ್ಟುಕೊಂಡು ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ. ಭೂ ವ್ಯಾಜ್ಯಗಳಲ್ಲಿ ಪೊಲೀಸ್ ದೂರು ನೀಡಿದ ತಕ್ಷಣ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಈ ವಿಷಯವನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಭೂ ವ್ಯಾಜ್ಯಗಳ ಕುರಿತು ಮಾಹಿತಿ ನೀಡಿದರು.

ಮನೆಯಲ್ಲಿ ಚಿನ್ನಾಭರಣ ಜಾಸ್ತಿಯಿದ್ದರೆ ಹೊರ ಊರಿಗೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಬೀಟ್ ಪೊಲೀಸರು ನಿಗಾ ವಹಿಸಲು ಅನುಕೂಲವಾಗುತ್ತದೆ. ಹಾಗೆಯೇ ಕೊರೊನಾ ಸೋಂಕು ಇರುವುದರಿಂದ ಸಾರ್ವಜನಿಕ ಶಾರದಾ ಉತ್ಸವ ಇನ್ನಿತರ ಆಚರಣೆ ಬಗ್ಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಿಂದ ವರ್ಷಕ್ಕೆ 300ರಿಂದ 350 ಸಾವುಗಳಾಗುತ್ತಿವೆ. ಇದರಲ್ಲಿ ಹೆಚ್ಚಿನವು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.