ಶಿರಸಿ: ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿಟ್ಟು ನಾವೆಲ್ಲ ಪ್ರಕರಣ ದಾಖಲಿಸಿದ್ದೆವು. ಇದರಿಂದ ನಮಗೆ ಇಂದು ನ್ಯಾಯ ಸಿಕ್ಕಿಂದಂತಾಗಿದೆ ಎಂದು ಯಲ್ಲಾಪುರ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವ ಕುರಿತು ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವನ್ನು ಇಟ್ಟು ನಾವೆಲ್ಲರೂ ಪ್ರಕರಣವನ್ನು ದಾಖಲಿಸಿದ್ದೆವು. ಅದರಿಂದ ಇಂದು ನಮಗೆ ನ್ಯಾಯ ಸಿಕ್ಕಿಂದಂತಾಗಿದೆ.
ದೇಶದ ಸಂವಿಧಾನ ವ್ಯವಸ್ಥೆಗೆ ಹೊಸ ಆಯಾಮ ಬರುವ ನಿರ್ಣಯವನ್ನು ಶ್ರೇಷ್ಠ ನ್ಯಾಯಾಲಯ ತೆಗೆದುಕೊಳ್ಳಲಿದೆ ಎನ್ನುವ ಅಪೇಕ್ಷೆಯಿದೆ. ಅದಕ್ಕೆ ಪೂರಕವಾಗಿ ಇಂದು ಸಾಕಷ್ಟು ಚರ್ಚೆ ನಡೆದಿದೆ. ಉಪಚುನಾವಣೆಗೆ ತಡೆ ನೀಡಿದ್ದಾರೆ. ಅ. 22 ರಂದು ವಿಚಾರಣೆ ಆರಂಭವಾಗಲಿದ್ದು, ನ್ಯಾಯವಾದ ತೀರ್ಪು ಬರುವ ವಿಶ್ವಾಸವಿದೆ ಎಂದರು.