ETV Bharat / state

ಹಳಿಯಾಳದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪ್ರತ್ಯೇಕ ದಾಳಿ : ಇಬ್ಬರು ಮಹಿಳೆಯರ ರಕ್ಷಣೆ - ಹಳಿಯಾಳದಲ್ಲಿ ಇಬ್ಬರು ಮಹಿಳೆಯರ ರಕ್ಷಣೆ

ಒಡನಾಡಿ ಸೇವಾ ಸಂಸ್ಥೆಯವರು ಹಳಿಯಾಳ ಪೊಲೀಸರ ಸಹಯೋಗದೊಂದಿಗೆ ಪಟ್ಟಣದ ಎರಡು ಖಾಸಗಿ ವಸತಿಗೃಹಗಳ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಇಬ್ಬರು ಮಹಿಳೆಯರನ್ನ ರಕ್ಷಿಸಿದ್ದಾರೆ..

Separate attacks on prostitution Protection of two women in Karawar
ಹಳಿಯಾಳದಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪ್ರತ್ಯೇಕ ದಾಳಿ
author img

By

Published : Dec 30, 2020, 7:57 AM IST

ಕಾರವಾರ : ಎರಡು ಖಾಸಗಿ ವಸತಿ ಗೃಹಗಳ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ ಘಟನೆ ಹಳಿಯಾಳದಲ್ಲಿ ನಡೆದಿದೆ.

ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯವರು ಹಳಿಯಾಳ ಪೊಲೀಸರ ಸಹಯೋಗದೊಂದಿಗೆ ಪಟ್ಟಣದ ಎರಡು ಖಾಸಗಿ ವಸತಿಗೃಹಗಳ ಮೇಲೆ ದಾಳಿ ನಡೆಸಿದರು. ಮೊದಲ ವಸತಿಗೃಹದಲ್ಲಿ ದಾಳಿ ಕಾಲದಲ್ಲಿ ತನಿಖಾಧಿಕಾರಿಗಳ ಕಣ್ಣು ತಪ್ಪಿಸಲು ಮಹಿಳೆಯರನ್ನು ರಹಸ್ಯ ಕೋಣೆಯಲ್ಲಿ ಬಚ್ಚಿಡಲಾಗಿತ್ತು.

ಪೊಲೀಸರು ರಹಸ್ಯ ಕೋಣೆಯನ್ನು ಪತ್ತೆ ಮಾಡಿ ಓರ್ವ ಸಂತ್ರಸ್ತೆಯನ್ನು ರಕ್ಷಿಸಿದ್ದು, ಇಬ್ಬರು ಮಹಿಳೆಯರನ್ನು ರಹಸ್ಯ ಕಿಟಕಿ ಮೂಲಕ ಹೊರಗೆ ಕಳುಹಿಸಲಾಗಿತ್ತು.

ಓದಿ : ಎಸ್ಎಸ್ಎಲ್​​ಸಿ ಪರೀಕ್ಷೆಯಲ್ಲಿ ಫೇಲ್.. ತಾಯಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ

ಇನ್ನೊಂದು ಪ್ರಕರಣದಲ್ಲಿ ಬಸ್ ಸ್ಟಾಂಡ್ ರಸ್ತೆಯಲ್ಲಿನ ಲಾಡ್ಜ್ ಮೇಲೆ ದಾಳಿ ನಡೆಸಿದ ತಂಡ, ಲಾಕ್ ಮಾಡಿಕೊಳ್ಳಲಾಗಿದ್ದ ರಹಸ್ಯ ಕೋಣೆಯ ಬಾಗಿಲನ್ನು ಮುರಿದು ತೆಗೆಯಿತು. ಇಲ್ಲಿಯೂ ಕೂಡ ಓರ್ವ ಮಹಿಳೆ ಪತ್ತೆಯಾಗಿದ್ದು, ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.